ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಸ್ಥಾನ ಇಳಿಕೆಗೆ ಅಸಮಾಧಾನ

9CBP1(sslc)
ರಾಜ್ಯಕ್ಕೆ 3 ನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಸಿ.ಎನ್.ಮೋನಿಷ್ ಸಾಯಿರನ್ನು ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
Published on

ಚಿಕ್ಕಬಳ್ಳಾಪುರ: ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ.73.16 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಜಿಲ್ಲಾವಾರು 18 ನೇ ಸ್ಥಾನ ಪಡೆದಿದೆ.

ಕಳೆದ 2023 ನೇ ಸಾಲಿನಲ್ಲಿ 5 ನೇ ಸ್ಥಾನ ಗಳಿಕೆಯ ಸಾಧನೆಯನ್ನು ತೋರಲಾಗಿತ್ತು. ಆದರೆ, ಈ ಬಾರಿ ಭಾರಿ ಪ್ರಮಾಣದಲ್ಲಿ ಇಳಿತವನ್ನು ಕಂಡಿದ್ದು ಇದು ಸ್ಥಳೀಯವಾಗಿ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಬಾಗೇಪಲ್ಲಿ ಪಟ್ಟಣದ ಬಿಜಿಎಸ್ ಶಾಲೆಯ ಎಸ್.ಎನ್.ಮೋನಿಷ್ ಸಾಯಿ ರಾಜ್ಯಕ್ಕೆ 3ನೇ ಟಾಫರ್ ಆಗಿರುವುದು ಖುಷಿಯ ವಿಚಾರ. ಇನ್ನೂ ಈ ಬಾರಿ ಜಿಲ್ಲೆಯಲ್ಲಿ 15,792 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11,624 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಬಾಕ್ಸ್

ಟಾಪರ್ ವಿದ್ಯಾರ್ಥಿಗಳು

ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಟಾಪರ್‌ಗಳು ಗಮನ ಸೆಳೆದಿದ್ದಾರೆ. ಬಾಗೇಪಲ್ಲಿಯ ಬಿಜಿಎಸ್ ಪಬ್ಲಿಕ್ ಶಾಲೆಯ ಎಸ್.ಎನ್.ಮೋನಿಷ್ (623), ಚೇಳೂರಿನ ಪ್ರಶಾಂತಿ ಶಾಲೆಯ ವಿದ್ಯಾರ್ಥಿ ಯಶ್ವಿನ್ ಕೆ.ಎ (621), ಚಿಂತಾಮಣಿಯ ಎಸ್.ಎನ್.ಆರ್ ಅಕಾಡೆಮಿಯ ವಿದ್ಯಾರ್ಥಿ ವೈ.ಎಸ್.ಕುಶಾಲ್ (620), ಬಾಗೇಪಲ್ಲಿಯ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿ ಲಕ್ಷ್ಮೀ ಲೀಶ ಎಸ್ (620) ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಟಿ.ಎಂ.ವಾಸವಿ (620) ಟಾಪರ್ ಗಳಾಗಿದ್ದಾರೆ.

ಬಾಕ್ಸ್

ರಾಜ್ಯದ ಟಾಪರ್‌ಗೆ ಸನ್ಮಾನ

ರಾಜ್ಯಕ್ಕೆ 3 ನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಸಿ.ಎನ್.ಮೋನಿಷ್ ಸಾಯಿರನ್ನು ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಪ್ರತಿಭಾವಂತನಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸನ್ಮಾನಿಸಿ, ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ,ಟಿ ನಿಟ್ಟಾಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಬೈಲಾಂಜನಪ್ಪ, ವಿದ್ಯಾರ್ಥಿಯ ಪಾಲಕರಾದ ಜಿ.ಎಸ್.ನಾಗರಾಜು ಮತ್ತು ವಿ.ಎಸ್. ಸರಿತಾ ಮತ್ತಿತರರು ಇದ್ದರು.

ಬಾಕ್ಸ್

ಹೊಸದಾಗಿ ನೋಂದಾಯಿತರು

ಹೆಸರನ್ನು ಹೊಸದಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಪೈಕಿ 7607 ಬಾಲಕರು, 7790 ಬಾಲಕಿಯರು ಸೇರಿದಂತೆ 15397 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು ಇದರಲ್ಲಿ 5132 ಬಾಲಕರು ಮತ್ತು 6440 ಬಾಲಕಿಯರು ಸೇರಿದಂತೆ 11572 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net