ವಿಘ್ನನಿವಾರಕನ ಸ್ವಾಗತ

19 bdvt hosamane ganesha (1)
ಭದ್ರಾವತಿ ಹೊಸಮನೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಸಭಾ ಗಣಪತಿ.
Published on

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಹಿಂದು ಮಹಾಸಭಾ ಗಣಪತಿ ದೇವಸ್ಥಾನದ ಎದುರು ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಹಿಂದು ಮಹಾಸಭಾ-ಹಿಂದು ರಾಷ್ಟ್ರಸೇನಾ ವತಿಯಿಂದ ಸೋಮವಾರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಜೈಕಾರ ಕೂಗಿ ಪಟಾಕಿ ಸಿಡಿಸಿ ವಿಘ್ನ ನಿವಾರಕನನ್ನು ಬರಮಾಡಿಕೊಂಡರು. ಮೊದಲ ದಿನ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಹಿಂದು ಮಹಾಸಭಾ ಅಧ್ಯಕ್ಷ ವಿ.ಕದಿರೇಶ್, ಮಂಜುನಾಥ್, ಜಿ.ಆನಂದಕುಮಾರ್, ಮಂಗೋಟೆ ರುದ್ರೇಶ್, ಎಸ್.ಮಣಿ, ಕೂಡ್ಲಿಗೆರೆ ಹಾಲೇಶ್, ದೊಡ್ಡಮನೆ ನಾರಾಯಣ, ಶೇಖರಪ್ಪ, ಜಿ.ಧರ್ಮಪ್ರಸಾದ್, ಚನ್ನಪ್ಪ. ಭವಾನಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net