ಕಾಂಗ್ರೆಸ್ ಅಧಿಕಾರದಿಂದ ಆಚರಣೆ ಅಡ್ಡಿ

sunil kumar new
Published on

ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಗಳನ್ನು ಗುರಿಯಾಗಿಸಿ, ಹಿಂದು ಆಚರಣೆಗಳಿಗೆ ಅಡ್ಡಿಪಡಿಸುವ ಘಟನೆಗಳು ಹೆಚ್ಚಾಗುತ್ತಿದೆ. ನಾಗಮಂಗಲದ ಘಟನೆ ಇದಕ್ಕೆಲ್ಲ ನಿದರ್ಶನವಿತ್ತಂತೆ ಇದೆ. ಶಾಂತಿಯುತವಾಗಿ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯ ಉದ್ದೇಶ ಪೂರ್ವಕವಾಗಿಯೇ ದಾಂಧಲೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟಿಸಿ ತಲ್ವಾರ್ ಝಳಪಿಸಿದ್ದಾರೆ. ನಾವು ನಾಗಮಂಗಲದಲ್ಲಿದ್ದೇವೆಯೋ ಅಥವಾ ಪಾಕಿಸ್ತಾನದಲ್ಲೋ ಎಂಬ ಸಂಶಯ ಮೂಡುತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ವಿ.ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net