

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ದಟ್ಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ ಮತ್ತು ಹೂಟಗಳ್ಳಿ ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಅ.10 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ದಟ್ಟಗಳ್ಳಿ 3ನೇ ಹಂತ, ತ್ರಿವೇಣಿ ಸೂಪರ್ ಮಾರ್ಕೆಟ್, ಕದಂಬ ಬೇಕರಿ, ಮುಖ್ಯ ಇಂಜಿನಿಯರ್ ಕಚೇರಿ, ದಟ್ಟಗಳ್ಳಿ ಐ ಬ್ಲಾಕ್, ಮುಡಾ ನೌಕರರ ಬಡಾವಣೆ, ಕನಕದಾಸನಗರ, ಆರ್‌ಟಿ ನಗರ, ಲಿಂಗಾಬುದಿಪಾಳ್ಯ, ವಿಶ್ವ ವಿದ್ಯಾಲಯ ಬಡಾವಣೆ, ವಾಸು ಬಡಾವಣೆ ಕೆ ಬ್ಲಾಕ್, ಆರ್.ಕೆ. ನಗರ, ಮೂಗನಹುಂಡಿ, ನಗರ್ತಹಳ್ಳಿ, ದೇವಗಳ್ಳಿ, ಬಲ್ಲಳ್ಳಿ, ಹನಗಳ್ಳಿ, ತಿಬ್ಬಯ್ಯನಹುಂಡಿ, ಬೀರಿಹುಂಡಿ ಐ.ಪಿ ಲಿಮಿಟ್ಸ್, ನೇಸರ ಟೆಕ್ ಪಾರ್ಕ್, ಹಾಲ್‌ಕೋಟ್ಸ್, ಶುಭಂ ಪ್ಯಾಕೇಜಿಂಗ್, ಇನ್‌ಟೆಲ್ ಕ್ಯಾಡ್, ಜೋಗಿತ ಪ್ಲಾಸ್ಟಿಕ್, ಆಶ್ರಯ ಯೋಜನೆ, ಎಸ್‌ವಿ ರಿಜೆನ್ಸಿ, ಡ್ಯಾಮ್‌ಡನ್ ಅಪಾರ್ಟ್ಮೆಂಟ್, ಬಿಜಿಎಸ್ ಬಡಾವಣೆ, ಒಡನಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.