ಮೈಸೂರಿನಲ್ಲಿ ನ.5 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

power
Published on

ಮೈಸೂರು: ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ನ.5 ರಂದು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬಲ್ಲಾಳ್ ವೃತ್ತ, ಚಾಮುಂಡಿಪುರಂ, ಆರ್‌ಟಿಒ ಕಚೇರಿ, ಚಾಮರಾಜ ಮೊಹಲ್ಲಾ, ಜೈನ್ ಭವನ್, ಬೆಸ್ತರಕೇರಿ, ಡಾ. ವಿಷ್ಣುವರ್ಧನ್ ರಸ್ತೆ, ಜಂತಗಳ್ಳಿ, ಮೋಸಂಬಾಯನಹಳ್ಳಿ, ಸಜ್ಜೆಹುಂಡಿ, ನಿರ್ಮಾಣ ಪ್ರಮೋಟರ್ಸ್‌, ಬಸವೇಶ್ವರ ಬಡಾವಣೆ, ವಾಜಮಂಗಲ, ವರುಣ, ದಂಡಿಕೆರೆ , ಮೆಲ್ಲಹಳ್ಳಿ, ಶಿವಪುರ, ಲಕ್ಷ್ಮೀಪುರ, ಹಲಗಯ್ಯನಹುಂಡಿ, ಮೇದರ ಕೇರಿ, ವಿದ್ಯಾರಣ್ಯಪುರಂ, ರಾಮಾನುಜ ರಸ್ತೆ, ಅಗ್ರಹಾರ, ಸುಣ್ಣದಕೇರಿ, ಹುಲ್ಲಿನ ಬೀದಿ, ಹೊಸಬಂಡಿಕೇರಿ, ಬಸವೇಶ್ವರ ರಸ್ತೆ, ತ್ಯಾಗರಾಜ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net