ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ

Trek to Srishaila from 12
Invitation to a poetry competition
Published on

ವಿಜಯಪುರ : 110/11 ಕೆವಿ ಉಮರಾಜ (ರೇವತಗಾಂವ) ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಹೊಸದಾಗಿ 2*10 ಎಂವಿ ಸಾಮರ್ಥ್ಯದ ಪರಿವರ್ತಕ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದ್ದು, 110/11 ಕೆವಿ ಕೆರೂರು ವಿದ್ಯುತ್​ ವಿತರಣಾ ಕೇಂದ್ರದಿಂದ ಹೊರ ಹೋಗುವ 11 ಕೆವಿ ಟಾಕಳಿ ಐಪಿ, 11 ಕೆವಿ ಕಲ್ಮಡ ಐಪಿ ಹಾಗೂ 11 ಕೆವಿ ಕೆರೂರು ಎನ್​ಜೆವೈ ನೀರು ಸರಬರಾಜು ವಿದ್ಯುತ್​ ಮಾರ್ಗಗಳಲ್ಲಿ ಏ. 2 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಹಾಗೂ ಏ. 3 ರಂದು 110/11 ಕೆವಿ ಕೆರೂರು ವಿದ್ಯುತ್​ ವಿತರಣಾ ಕೇಂದ್ರದಿಂದ ಹೊರಹೋಗುವ 11 ಕೆವಿ ಅಂಕಲಮ್ಮ ಐಪಿ ಹಾಗೂ 11 ಕೆವಿ ಕಲ್ಮಡ ಐಪಿ ವಿದ್ಯುತ್​ ಮಾರ್ಗಗಳಲ್ಲಿ ಅಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅಲ್ಲದೆ, ಏಪ್ರಿಲ್​ 4 ರಂದು 110/11 ಕೆವಿ ಕೆರೂರು ವಿದ್ಯುತ ವಿತರಣಾ ಕೇಂದ್ರದಿಂದ ಹೊರಹೋಗುವ 11 ಕೆವಿ ಅಂಕಲಮ್ಮ ಐಪಿ ವಿದ್ಯುತ್​ ಮಾರ್ಗಗಳಲ್ಲಿ ಅಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net