ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗಲಿ

disrtrict koppal women degree collage
Published on

ಕೊಪ್ಪಳ: ಆಯಾ ರಾಜ್ಯಗಳಲ್ಲಿ ರಾಜ್ಯ ಭಾಷೆಯಲ್ಲಿಯೇ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡುವ ಜರೂರಿದೆ. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಕ್ರಿಯಾ ವೇದಿಕೆ ವಿದ್ಯಾರ್ಥಿ ಟಕ ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆ ಶಿಕ್ಷಣ ಪರಿಣಾಮಕಾರಿ. ಇದರಿಂದ ಮಕ್ಕಳಿಗೆ ವಿಷಯ ಚೆನ್ನಾಗಿ ಅರ್ಥವಾಗಲಿದೆ. ಎಲ್ಲ ರಾಜ್ಯಗಳು ಈ ದಿಸೆಯಲ್ಲಿ ಯೋಚಿಸಬೇಕು. ವಿದ್ಯಾರ್ಥಿಗಳು ಸಾಹಿತ್ಯ ಓದಿಕೊಳ್ಳಿ. ಓದಿದ ವಿಷಯ ಮನನ ಮಾಡಿಕೊಂಡರೆ ಶಿಕ್ಷಣ ಪರಿಣಾಮಕಾರಿಯಾಗಿರಲಿದೆ. ಕಲೆ, ಸಾಹಿತ್ಯ, ಸಂಗೀತ ಇಲ್ಲದಿದ್ದರೆ ಮನಸ್ಸು ಜಡವಾಗಲಿದೆ. ನಮ್ಮ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸುಲಭಕ್ಕೆ ಶಿಕ್ಷಣ ಸಿಕ್ಕಿಲ್ಲ. ಜಾಗತೀಕರ ಪರಿಣಾಮ ಇಂಗ್ಲಿಷ್​ ಬೆಳೆಯುತ್ತಿದೆ. ಉಳಿದ ಭಾಷೆ ನಶಿಸುತ್ತಿವೆ. ಕನ್ನಡ ಪ್ರಾಚಿನ ಭಾಷೆ. ದಣದ ದ್ರಾವಿಡ ಭಾಷೆಗಳಲ್ಲೊಂದು. ನಮ್ಮ ಭಾಷೆ ಉಳಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದರು.

ಶಿಕ್ಷಣ ಪ್ರೇಮಿ ಬಿ.ಜಿ.ಕರಿಗಾರ ಮಾತನಾಡಿ, ಕುವೆಂಪು, ಬೇಂದ್ರೆ ಹಾಗೂ ಇತರ ಸಾಹಿತಿಗಳ ಪುಸ್ತಕ ಓದಿ. ನಮ್ಮ ಹಿರಿಯರ ಶ್ರಮದಿಂದ ಕರ್ನಾಟಕ ರಾಜ್ಯ ಉದಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದವರೂ ಉನ್ನತ ಸಾಧನೆ ಮಾಡಿದ್ದಾರೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಗಣಪತಿ ಲಮಾಣಿ, ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಹುಲಿಗೆಮ್ಮ ಮಾತನಾಡಿದರು. ಉಪನ್ಯಾಸಕರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಡಾ.ಪ್ರದಿಪ್​ ಕುಮಾರ್​, ಡಾ.ನರಸಿಂಹ, ಡಾ.ಅಶೋಕ ಕುಮಾರ್​, ಸುಮಿತ್ರ, ಶುಭ, ಶಿವ ಪ್ರಸಾದ್​ ಹಾದಿಮನಿ, ಡಾ. ಮಂಜಪ್ಪ, ಡಾ. ಸೂರಪ್ಪ, ವಿರೂಪಾಕ್ಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net