ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ- ವಾರ್ತಾ ಸಹಾಯಕ ನಿರ್ದೇಶಕ ಸುರೇಶ ಅಭಿಪ್ರಾಯ

Disrtict Koppal Media Galeery Gavimutt jatre
Published on

ಕೊಪ್ಪಳ: ಶ್ರೀ ಗವಿದ್ಧೇಶ್ವರ ಜಾತ್ರಾ ಮಹೋತ್ಸವದ ಸಂಪೂರ್ಣ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿರುವ ಎಲ್ಲ ಮಾಧ್ಯಗಳ ಪಾತ್ರ ಮಹತ್ವದ್ದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಿ.ಸುರೇಶ ಅಭಿಪ್ರಾಯಪಟ್ಟರು.

ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಜಾತ್ರಾ ಮಹೋತ್ಸವ-ದ ನಿಮಿತ್ತ ಶುಕ್ರವಾರ ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಮಾಧ್ಯಮಗಳು ಜಾತ್ರೆಯಲ್ಲಿ ನಡೆಯುವ ಧಾರ್ಮಿಕ, ಸಾಂಪ್ರದಾಯಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮಾಹಿತಿಗಳನ್ನು ಬಿತ್ತರಿಸಿ ಭಕ್ತರನ್ನು ತಲುಪುತ್ತಿವೆ. ಜಿಲ್ಲೆಯಷ್ಟೆ ಅಲ್ಲದೆ ರಾಜ್ಯ, ರಾಷ್ಟ್ರ ಮಟ್ಟದವರೆಗೆ ಸುದ್ದಿಗಳನ್ನು ಪ್ರಕಟಿಸಿ ಉತ್ಸವಕ್ಕೆ ಮೆರುಗು ನೀಡುತ್ತಿದ್ದು, ಈ ಅಳಿಲು ಸೇವೆ ಮೂಲಕ ನಾವೆಲ್ಲ ಶ್ರೀ ಗವಿಸಿದ್ಧೇಶ್ವರ ಕೃಪೆಗೆ ಪಾತ್ರರಾಗೋಣ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ, ಪ್ರಾಧ್ಯಾಪಕ ಗಂಗಾಧರ ಸೊಪ್ಪಿಮಠ, ಮಾಧ್ಯಮ ಪ್ರತಿನಿಧಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net