ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

buliding labour union workers protest in koppal
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಶನಿವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ೆಡರೇಷನ್​ ಜಿಲ್ಲಾಧ್ಯಕ್ಷ ಕಾಸಿಂ ಸರ್ದಾರ, ತಾಲೂಕು ಅಧ್ಯಕ್ಷ ಹನುಮೇಶ ಭೋವಿ, ಉಪಾಧ್ಯಕ್ಷ ಇಸ್ಮಾಯಿಲ್​ ಇಟಗಿ, ಪ್ರಮುಖರಾದ ದುರ್ಗಮ್ಮ ವಡ್ಡರ, ಮೈಲಾರಪ್ಪ, ಮೆಹಬೂಬ್​ ಇದ್ದರು.
Published on

ಕೊಪ್ಪಳ: ನೀತಿ ಸಂಹಿತೆ ನೆಪದಲ್ಲಿ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ನೀಡಲು ಅರ್ಜಿ ಸ್ವೀಕರಿಸುತ್ತಿಲ್ಲ. ಜತೆಗೆ ಅರ್ಜಿ ಸಲ್ಲಿಕೆ ಅವಧಿ ಆಗಸ್ಟ್​ವರಗೆ ವಿಸ್ತರಿಸಲು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ೆಡರೇಷನ್​ ಪದಾಧಿಕಾರಿಗಳು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಚುನಾವಣೆ ನೆಪ ನೀಡಿ ಅರ್ಜಿ ಸ್ವೀಕರಿಸುತ್ತಿಲ್ಲ. ಇದರಿಂದ ಲಾಂತರ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗಿದೆ. ಇದಕ್ಕೆ ಯಾವುದೇ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲವೇ ? ಪಿಂಚಣಿ, ವೈದ್ಯಕಿಯ ವೆಚ್ಚ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಹೆರಿಗ ಭತ್ಯೆ, ಮದುವೆ ಸಹಾಯಧನ ಅರ್ಜಿ ಸ್ವೀಕರಿಸುತ್ತಿಲ್ಲ. ಇಬ್ಬರು ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ನೀಡುವಂತೆ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದೆ. ಆದರೂ ಮಂಡಳಿ ನೀಡದೇ ಆದೇಶ ಉಲ್ಲಂಘಿಸಿದೆ. ಇದನ್ನು ಖಂಡಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದೆಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಮಂಡಳಿ ಸೌಲಭ್ಯಗಳಿಗೆ ಅರ್ಜಿ ಸ್ವೀಕರಿಸಬೇಕು. ಮೇ 30ಕ್ಕೆ ಮುಕ್ತಾಯವಾಗುವ ಶೈಕ್ಷಣಿಕ ಅರ್ಜಿಗಳ ಸಲ್ಲಿಕೆ ಅವಧಿ ಆಗಸ್ಟ್​ವರೆಗೆ ವಿಸ್ತರಿಸಬೇಕು. ಈ ಹಿಂದಿನಂತೆ ಶೈಕ್ಷಣಿಕ ಸಹಾಯಧನ ನೀಡಬೇಕು. ನೈಜ ಕಾರ್ಮಿಕರ ಅರ್ಜಿ ವಿನಾ ಕಾರಣ ತಿರಸ್ಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಲಬೇಕು. ಹೊಸ ಅರ್ಜಿ, ನವೀಕರಣ ಅರ್ಜಿ ಸಲ್ಲಿಕೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕು. ವಿದ್ಯಾರ್ಥಿನಿಯರಾದ ಅಮೃತಾ, ಅಕ್ಷತಾ ಅವರಿಗೆ ಸಹಾಯಧನ ನೀಡಬೇಕು. ಬಾಕಿ ಅರ್ಜಿ ವಿಲೇವಾರಿಗೊಳಿಸಬೇಕೆಂದು ಒತ್ತಾಯಿಸಿದರು.

ೆಡರೇಷನ್​ ಜಿಲ್ಲಾಧ್ಯಕ್ಷ ಕಾಸಿಂ ಸರ್ದಾರ, ತಾಲೂಕು ಅಧ್ಯಕ್ಷ ಹನುಮೇಶ ಭೋವಿ, ಉಪಾಧ್ಯಕ್ಷ ಇಸ್ಮಾಯಿಲ್​ ಇಟಗಿ, ಪ್ರಮುಖರಾದ ದುರ್ಗಮ್ಮ ವಡ್ಡರ, ಮೈಲಾರಪ್ಪ, ಮೆಹಬೂಬ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net