ತಾಲೂಕು ಆಡಳಿದಿಂದ ನಾಡಗೀತೆಗೆ ಅಗೌರವ

09 TKE 1(DADAPEER)
Published on

ತರೀಕೆರೆ: ರಾಜ್ಯ ಸರ್ಕಾರ ನಾಡಗೀತೆಯಾಗಿ ಅಂಗೀಕರಿಸಿರುವ ರಾಷ್ಟ್ರಕವಿ ಕುವೆಂಪು ರಚಿತ ಜಯ ಭಾರತ ಜನನಿಯ ತನುಜಾತೆ ಗೀತೆ ಮುಂದಿನ ತಿಂಗಳು ನೂರುವರ್ಷ ಪೂರೈಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಪುರಸಭೆ ಸದಸ್ಯ ಟಿ.ದಾದಾಪೀರ್ ಹರ್ಷ ವ್ಯಕ್ತಪಡಿಸಿದ್ದಾರೆ.

ನವೆಂಬರ್ 1ರಂದು ಆಚರಿಸುವ ಕನ್ನಡ ರಾಜ್ಯೋತ್ಸವ ಸೇರಿ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ನಾಡಗೀತೆಯನ್ನು ಕಂಠಸಿರಿ ಮೂಲಕ ಹಾಡಿ ಗೌರವಿಸಲಾಗುತ್ತಿತ್ತು. ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ಆಚರಣೆ ವೇಳೆ ತಾಲೂಕು ಆಡಳಿತ ಧ್ವನಿ ಮುದ್ರಿತ ನಾಡಗೀತೆ ಕೇಳಿಸಿ ನಾಡಗೀತೆಗೆ ಅಗೌರವ ತೋರಿದೆ ಎಂದು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.

ಈ ಹಿಂದೆ ಶಾಲಾ ಮಕ್ಕಳಿಂದ ಗೀತೆ ಹಾಡಿಸಲಾಗುತ್ತಿತ್ತು. ತಾಲೂಕು ಆಡಳಿತ ಈ ಪದ್ಧತಿ ಕೈ ಬಿಟ್ಟಿರುವುದು ತರವಲ್ಲ. ಇದರಿಂದ ನಾಡು ನುಡಿ ಬಗ್ಗೆ ಅಭಿಮಾನ ಶೂನ್ಯತೆ ವ್ಯಕ್ತವಾದಂತಾಗಿದೆ. ಪಟ್ಟಣದ ಕೆಲವು ಶಾಲೆಗಳಲ್ಲಿ ನಾಡಗೀತೆ ಕಲಿಸಲು ನಿರಾಸಕ್ತಿ ವಹಿಸಲಾಗುತ್ತಿದೆ ಎಂದು ದೂರಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಕಂಠಸಿರಿ ಮೂಲಕ ನಾಡಗೀತೆ ಹಾಡಿಸಲು ಕ್ರಮವಹಿಸಬೇಕು. ಈ ಮೂಲಕ ನಾಡಗೀತೆಗೆ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net