ಅನುಪಯುಕ್ತ ವಸ್ತುಗಳ ವಿಲೇವಾರಿ ಮಾಡಿ

Dispose of useless items
Dispose of useless items
Published on

ಬಾದಾಮಿ: ರೋಗಿಗಳನ್ನು ಸಹೋದರರಂತೆ ಕಂಡು ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ ಡಿ.ಎನ್. ತಾಲೂಕಾಸ್ಪತ್ರೆ ಸಿಬ್ಬಂದಿಗೆ ಸಲಹೆ ನೀಡಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಸಭಾಭವನದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಅನುಪಯುಕ್ತ ವಸ್ತುಗಳಿವೆ. ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ತುಕ್ಕು ಹಿಡಿದ ಕಾಟಾ, ಟೇಬಲ್ ಬದಲಾವಣೆ ಮಾಡಬೇಕು. ಲಿಕೀಜ್ ಆಗುತ್ತಿರುವ ಪೈಪ್ ಸರಿಪಡಿಸಬೇಕು. ಕುಡಿಯುವ ನೀರು ಎಲ್ಲ ಕಡೆಗೆ ಸಿಗುವಂತಾಗಬೇಕು. ಒಪಿಡಿ ಕೌಂಟರ್ ಸ್ಥಳಾಂತರ ಮಾಡಬೇಕು. ಪುರುಷರು, ಮಹಿಳೆಯರು ಎಂದು ನಾಮಲಕ ಹಾಕಿಸಬೇಕು. ಆಸ್ಪತ್ರೆಯಲ್ಲಿನ ದುರಸ್ತಿಗೆ ಆದ್ಯತೆ ನೀಡಿ, ವಾರಕ್ಕೆ ಒಮ್ಮೆಯಾದರೂ ಸ್ವಚ್ಛತಾ ಅಭಿಮಾನ ನಡೆಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಡಾ.ಕುಸುಮಾ ಮಾಗಿ, ತಾಲುಕು ಆರೋಗ್ಯ ಸಲಹಾ ಸಮಿತಿ ಸದಸ್ಯ ವೆಂಟಕೇಶ ಮೇದಾರ, ಅಶೋಕ ಕೋಟನಕರ, ಪ್ರಕಾಶ ನಡಮನಿ, ಹನಮಂತ ಅಪ್ಪನ್ನವರ, ಡಾ.ಎಂ.ಬಿ.ಪಾಟೀಲ, ಡಾ.ಕಿರಣ ಕುಳಗೇರಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟೀಮನಿ, ಡಾ.ಶಂಕರ ಉಡಚಂಚಿ ಇದ್ದರು.

ಸಭೆಯಲ್ಲಿ ಡಾ.ಕವಿತಾ ಶಿವನಾಯಕರ, ಡಾ.ಹೂವಪ್ಪ ಗಾಣಿಗೇರ, ಡಾ.ಬಿ.ಎಚ್. ರೇವಣಸಿದ್ದಪ್ಪ, ಡಾ.ರೇಖಾ ಗಾಣಿಗೇರ, ಡಾ.ಸವಿತಾ ಕಡೆಮನಿ ಇದ್ದರು.

ಸಭೆಗೂ ಮುನ್ನ ಮಂಜುನಾಥ ಅವರು ತಾಲೂಕಾಸ್ಪತ್ರೆಯ ಎಲ್ಲ ವಾರ್ಡ್, ಐಸಿಯು, ಡಯಾಸಿಲಿಸ್, ಶೌಚಗೃಹ, ಒಪಿಡಿ, ಸೇರಿ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಪರಿಶೀಲನೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net