

ಅರಕೇರಾ: ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಹಸಿ ಮತ್ತು ಒಣಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಪಿಡಿಒ ವೆಂಕೋಬ ನಾಯಕಗೆ ಗುರುವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಚಾಲಕ ವೆಂಕಟೇಶ ಗುತ್ತೆದಾರ ಮಾತನಾಡಿ, ಪ್ರತಿ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಹಸಿ ಮತ್ತು ಒಣ ಕಸವನ್ನು ನಿತ್ಯ ಸಂಗ್ರಹಿಸಬೇಕು. ಬಸ್ ನಿಲ್ದಾಣ, ದೇವಸ್ಥಾನ, ಬೀದಿ ಬದಿ, ಅಂಗಡಿ, ಹೋಟೆಲ್, ಮನೆ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಸಿರವಾರ ಅಥವಾ ದೇವದುರ್ಗ ಮುಖ್ಯ ರಸ್ತೆ ಮೇಲೆ ಹಾಕಲಾಗುತ್ತಿದೆ.ಕೂಡಲೇ ಕಸವನ್ನು ಸಂಗ್ರಹಿಸಿ ಗಲಗ ಮುಖ್ಯರಸ್ತೆ ಪಕ್ಕದಲ್ಲಿರುವ ಕಸವಿಲೇವಾರಿ ಘಟಕಕ್ಕೆ ಸಾಗಿಸಬೇಕು.
ಅರಕೇರಾ ನೂತನ ತಾಲೂಕು ಆಗಿರುವದರಿಂದ ಸ್ವಚ್ಛೆತೆಗೆ ಆದ್ಯತೆ ನೀಡಬೇಕು. ಒಂದು ವೇಳೆ ನಿರ್ಲಕ್ಷೃ ಮಾಡಿದರೆ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಪದಾಧಿಕಾರಿಗಳಾದ ಉಸ್ಮಾನ ಪಾಷಾ, ಭೀಮನಗೌಡ ಪಾಟೀಲ್, ಹನುಮಂತ್ರಾಯ ಗೌಡ, ಬಸವರಾಜ ಲಿಂಗದಹಳ್ಳಿ, ದೇವೇಂದ್ರಪ್ಪ ತಾತ ಗಲಗ, ಚನ್ನಪ್ಪ ಗಲಗ, ರೇಣುಕಮ್ಮ, ಚನ್ನಮ್ಮ ದೇವದುರ್ಗ, ಜಯಣ್ಣ ನಾಯಕ ವಂದಲಿ ಇತರರಿದ್ದರು.