ಸರ್ಕಾರದಿಂದ ಜನತೆಗೆ ಸಾಮಾಜಿಕ ನ್ಯಾಯ : ಬಿ.ರಮಾನಾಥ ರೈ ಹೇಳಿಕೆ

New Project (36)
Published on

ಬಂಟ್ವಾಳ : ಚುನಾವಣೆ ಪೂರ್ವದಲ್ಲಿ ಪಕ್ಷ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೆ ಸವಲತ್ತುಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯವನ್ನು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಮಾಡುತ್ತಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಆರಂಭದಲ್ಲಿ ಯೋಜನೆ ಟೀಕಿಸಿ ಅಪಹಾಸ್ಯ ಮಾಡಿದ್ದರು. ಆದರೆ ಅದು ಎಲ್ಲೂ ದುರುಪಯೋಗ ಆಗದೆ ಜನರಿಗೆ ಪ್ರಯೋಜನವಾಗುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಸಜೀಪಮೂಡ ಗ್ರಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೂಡ ಅಧ್ಯಕ್ಷ ಬೇಬಿ ಕುಂದರ್, ತಾಪಂ ಮಾಜಿ ಸದಸ್ಯ ಕೆ.ಸಂಜೀವ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ನಾರಾಯಣ ನಾಯ್ಕ, ತಾಪಂ ಮಾಜಿ ಸದಸ್ಯ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂ ಡಾರಿ, ಪದ್ಮನಾಭ ರೈ, ಐಡಾ ಸುರೇಶ್, ಸಜೀಪಮೂಡ ಗ್ರಾಪಂ ಅಧ್ಯಕ್ಷೆ ಶೋಭಾಶೆಟ್ಟಿ, ಉಪಾಧ್ಯಕ್ಷೆ ಫೌಝಿಯಾ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ನಾವೂರು, ಪ್ರಮುಖರಾದ ಅಬ್ದುಲ್ ಕರೀಂ, ಯೂಸುಫ್ ಕರಂದಾಡಿ, ವಿಶ್ವನಾಥ ಬೆಳ್ಚಾಡ, ಸಿದ್ದೀಕ್ ಕೊಳಕೆ, ಇಸ್ಮಾಯಿಲ್, ದೇವಿಪ್ರಸಾದ್ ಪೂಂಜ, ಅಶೋಕ್ ಕೋಮಾಲಿ, ಶಮೀರ್, ರಮೇಶ್ ಎಂ.ಪ್ರಶಾಂತ್ ವಿಟ್ಲಕೋಡಿ, ಹರಿಣಾಕ್ಷಿ, ಸತೀಶ್ ಕುಮಾರ, ಕೃಷ್ಣಪ್ಪ ಪೂಜಾರಿ, ಪಿಡಿಒಗಳಾದ ಮಾಯ ಕುಮಾರಿ, ಲಕ್ಷ್ಮಣ್, ಹರೀಶ್ ಕೆ.ಉಪಸ್ಥಿತರಿದ್ದರು.

ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿದರು, ಚಂದ್ರಪ್ರಕಾಶ್ ಶೆಟ್ಟಿ ಪ್ರಾಸ್ತವಿಸಿದರು. ಇರಾ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ನಿರೂಪಿಸಿದರು.

ಜನರು ನೆನೆಪಿಟ್ಟುಕೊಳ್ಳುವಂಥ ಕಾರ್ಯಕ್ರಮ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಾಂಗ್ರೆಸ್ ಟೀಕೆಗೆ ಎದೆಗುಂದುವುದಿಲ್ಲ, ತಾನು ಹಾಕಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಟೀಕಿಸುವವರು ತಲೆತಗ್ಗಿಸುವಂತೆ ಮಾಡಿದೆ. ಪದ್ಮರಾಜ್ ಆರ್.ಪೂಜಾರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ https://www.vijayavani.net/demand-for-underpass https://www.vijayavani.net/sweeks-3-programme

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net