

ಮೈಸೂರು: ವಿಶ್ವ ಕಲಾ ದಿನಾಚರಣೆ ಅಂಗವಾಗಿ ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ವಿಶಿಷ್ಟ 3ಡಿ ಛಾಯಾಚಿತ್ರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.
ನಗರದ ಛಾಯಾಚಿತ್ರಕಲಾವಿದರಾದ ಅರಸಿಕುಮಾರ್ ಅವರ 25ಕ್ಕೂ ಹೆಚ್ಚಿನ ವಿಶಿಷ್ಟ 3ಡಿ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ನಂಜನಗೂಡು ರಸಬಾಳೆ, ಹುಲಿ, ಯಕ್ಷಗಾನ ಕಲಾವಿದ, ಡೈನೋಸಾರ್, ಮಾನವ ಅಸ್ತಿ ಪಂಜರ, ನಾನಾ ಪಕ್ಷಿಗಳು, ಕುದುರೆ ಹೀಗೆ… ನಾನಾ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ.