ಸಸ್ಯ ಸಂಭ್ರಮದಲ್ಲಿ ಸಸಿಗಳ ಪ್ರದರ್ಶನ, ಮಾರಾಟ

10 ylp 02 (sasya)
Published on

ಯಲ್ಲಾಪುರ; ಪಟ್ಟಣದ ಎಪಿಎಂಸಿಯ ಶ್ರೀಮಾತಾ ಕಂಪನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ ಹಾಗೂ ಮಾತೃ ಮಂಡಳಿಯ ಆಶ್ರಯದಲ್ಲಿ ಸಸ್ಯ ಸಂಭ್ರಮ- 2023 ನಡೆಯಿತು.


ಕಾರ್ಯಕ್ರಮವನ್ನು ಶ್ರೀಮಾತಾ ಕಂಪನಿಯ ಮುಖ್ಯಸ್ಥ ಶ್ರೀಪಾದ ಭಟ್ಟ ಮಣ್ಮನೆ ಉದ್ಘಾಟಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಅಧ್ಯಕ್ಷತೆ ವಹಿಸಿದ್ದರು.


ನೇತ್ರ ತಜ್ಞೆ ಡಾ. ಸೌಮ್ಯಾ ಕೆ.ವಿ, ಮಾತೃಮಂಡಳಿಯ ಅಧ್ಯಕ್ಷೆ ರಮಾ ದೀಕ್ಷಿತ್, ಸಂಘಟಕರಾದ ಗಾಯತ್ರಿ ಬೋಳಗುಡ್ಡೆ, ಜಾಹ್ನವಿ ಮಣ್ಮನೆ, ಸಂಧ್ಯಾ ಹೆಗಡೆ ಕೊಂಡದಕುಳಿ ಇತರರಿದ್ದರು.


ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳು ಸೇರಿ ಬೇರೆ ಬೇರೆ ಜಾತಿಯ ಗಿಡಗಳು, ವಿವಿಧ ಬಗೆಯ ತಿಂಡಿ- ತಿನಿಸುಗಳ ಪ್ರದರ್ಶನ, ಮಾರಾಟ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ನೂರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net