ಸ್ಥಳಾಂತರಗೊಂಡವರ ಸಮಸ್ಯೆ ನಿವಾರಿಸುವೆ

7
ರಾಮದುರ್ಗದಲ್ಲಿ ಮಾರಡಗಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕಾಗಿ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಅಶೋಕ ಪಟ್ಟಣ ಮಾತನಾಡಿದರು. ಪ್ರಕಾಶ ಹೊಳೆಯಪ್ಪಗೋಳ, ಪ್ರವೀಣಕುಮಾರ ಸಾಲಿ ಇತರರಿದ್ದರು.
Published on

ರಾಮದುರ್ಗ: ಪ್ರವಾಹಕ್ಕೆ ತುತ್ತಾಗುತ್ತಿರುವ ಹಿನ್ನಲೆಯಲ್ಲಿ 2009ರಲ್ಲಿ ಸ್ಥಳಾಂತರಗೊಂಡ ಮಾರಡಗಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಮಾರಡಗಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮಸ್ಥರ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮಸ್ಥರು ಪ್ರವಾಹ ಸಂದರ್ಭದಲ್ಲಿ ನಡೆದ ಲೋಪಗಳು, ಸ್ಮಶಾನ ಜಾಗ, ನಿವೇಶನಗಳು ಸಂಪೂರ್ಣವಾಗಿ ಹಂಚಿಕೆಯಾಗದೆ ಇರುವುದು ಸಮಸ್ಯೆಗಳನ್ನು ಶಾಸಕರ ಎದುರು ಬಿಚ್ಚಿಟ್ಟರು. ಮಾರಡಗಿ ಗ್ರಾಮದಲ್ಲಿ 157 ಮನೆಗಳಿವೆ. ಒಟ್ಟಾರೆ 32 ನಿವೇಶನಗಳನ್ನು ಸ್ಥಳಾಂತರಗೊಂಡ ಮಾರಡಗಿ ಗ್ರಾಮಕ್ಕೆ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಮಸ್ಯೆ ಆಲಿಸಿ ಅಶೋಕ ಪಟ್ಟಣ ಮಾತನಾಡಿ, ತಹಸೀಲ್ದಾರ್, ತಾಪಂ ಇಒ ಸೇರಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಾಂತರಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾರೆ. ಸ್ಮಶಾನ ಜಾಗದ ಸಮಸ್ಯೆ ಕೂಡ ಬಗೆಹರಿಸಲಾಗುವುದು ಎಂದರು. ತಹಸೀಲ್ದಾರ್ ಪ್ರಕಾಶ ಹೊಳೆಯಪ್ಪಗೋಳ, ತಾಪಂ ಇಒ ಪ್ರವೀಣಕುಮಾರ ಸಾಲಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net