ಸುಳ್ಳು ದಾಖಲೆ ಸೃಷ್ಟಿಸಿ ಕೆಲಸಪಡೆದಿದ್ದ ನೌಕರನ ವಜಾ

suspend
Published on

ಯಳಂದೂರು : ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಟ್ಟಿಗೆ ಹುದ್ದೆ (ಪಂಜು ಹಿಡಿಯುವುದು)ಪಡೆದಿದ್ದ ನೌಕರನನ್ನು ದೇಗುಲದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ವಜಾಗೊಳಿಸಿ ಆದೇಶಿಸಿದ್ದಾರೆ. ಬಿ.ಆರ್.ರಂಗನಾಥ್ ವಜಾಗೊಂಡ ನೌಕರ. ಈತ ಕಟ್ಟಿಗೆ ಹುದ್ದೆ (ಪಂಜು ಹಿಡಿಯುವುದು) ಕೆಲಸಕ್ಕಾಗಿ ನಕಲಿ ವಂಶವೃಕ್ಷ ನೀಡಿ 2010ರಲ್ಲಿ ನೇಮಕಗೊಂಡಿದ್ದ. ಈ ಹುದ್ದೆ ವಂಶ ಪಾರಂಪರ್ಯವಾಗಿದ್ದು ಇದನ್ನು ನಕಲಿ ವಂಶವೃಕ್ಷ ನೀಡಿ ಪಡೆದಿದ್ದಾರೆ ಎಂದು ರತ್ನಮ್ಮ ಎಂಬುವವರು ಜಿಲ್ಲಾಡಳಿತ ಹಾಗೂ ಲೋಕಾಯುಕ್ತಕ್ಕೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ಆರಂಭಿಸಿದ ಉಪ ವಿಭಾಗಾಧಿಕಾರಿ ಹಾಗೂ ದೇಗುಲದ ಆಡಳಿತಾಧಿಕಾರಿಯೂ ಆದ ಮಹೇಶ್ ರಂಗನಾಥ್ ಅವರನ್ನು ಸೇವೆಯಿಂದ ವಜಾ ಮಾಡಿ ಡಿ.13ರಂದು ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net