ಗ್ರಾಮಲೆಕ್ಕಾಧಿಕಾರಿ, ಕಂಪ್ಯೂಟರ್ ಆಪರೇಟರ್ ವಜಾಗೊಳಿಸಿ

20KDR3 (1)
ಬೆಳೆ ಪರಿಹಾರ ನಿಧಿಯಲ್ಲಿ ಅವ್ಯವಹಾರ ಮಾಡಿರುವ ಕಲ್ಕರೆ ಗ್ರಾಪಂ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಕಡೂರು: ಕಲ್ಕರೆ ಗ್ರಾಪಂನ ರೈತ ಲಾನುಭವಿಗಳಿಗೆ 2022-23ನೇ ಸಾಲಿನ ನೆರೆ ಪರಿಹಾರಕ್ಕೆ ಮಂಜೂರಾದ ಹಣವನ್ನು ಅಕ್ರಮವಾಗಿ ಬೇರೆಯವರ ಬ್ಯಾಂಕ್ ಖಾತೆಗೆ ಸಂದಾಯ ಮಾಡಿ ರೈತರು ಹಾಗೂ ಸರ್ಕಾರಕ್ಕೆ ವಂಚನೆ ಮಾಡಿರುವ ಈ ಹಿಂದಿನ ಗ್ರಾಮಲೆಕ್ಕಾಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ವಜಾಗೊಳಿಸುವಂತೆ ಶನಿವಾರ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಯತೀಶ್ ಮಾತನಾಡಿ, ನೆರೆ ಪರಿಹಾರದಲ್ಲಿ ರೈತರಿಗೆ ಗ್ರಾಮ ಲೆಕ್ಕಾಧಿಕಾರಿ ಸಾಕಷ್ಟು ಮೋಸ ಮಾಡಿದ್ದಾರೆ. ಜತೆಯಲ್ಲಿ ಪಂಚಾಯಿತಿ ಡಿಇಒ ಕೂಡ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಪಂಚಾಯಿತಿಗೆ ಸರಿಯಾಗಿ ಕೆಲಸಕ್ಕೆ ಬಾರದೇ ಬೇಜಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಪಂಚಾಯಿತಿಯಲ್ಲಿ ಆಗಬೇಕಾದ ಕೆಲಸಗಳು ವಿಳಂಬವಾಗುತ್ತಿದೆ. ನೆರೆಪರಿಹಾರದ ಅವ್ಯವಹಾರದಲ್ಲಿ ಶಾಮೀಲಾಗಿರುವ ಡಿಇಒ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದ ಮುಖಂಡರಾದ ಲಕ್ಷ್ಮಣ್, ಶಶಿಕುಮಾರ್, ಪ್ರಭುಕುಮಾರ್, ಗೋವಿಂದಪ್ಪ, ಶಿವರಾಜ್, ಶೇಖರಪ್ಪ, ತಮ್ಮಯ್ಯಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net