ಕಾಂಗ್ರೆಸ್ ಸರ್ಕಾರ ವಜಾಗೊಳಿಸಿ

jkd 20-2 protest
ಜಮಖಂಡಿ ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ಜಮಖಂಡಿ ಮತಕ್ಷೇತ್ರದ ಬಿಜೆಪಿ ವತಿಯಿಂದ ರಸ್ತೆ ತಡೆ ನಡೆಸಿ ಶಿರಸ್ತೆದಾರ ಬಸವರಾಜ ಸಿಂಧೂರ ಅವರಿಗೆ ಮನವಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ. ಉಪಾಧ್ಯೆ, ಪ್ರಕಾಶ ಕಾಳೆ, ಯಮನೂರು ಮೂಲಂಗಿ, ಏಗಪ್ಪ ಸವದಿ, ನಾಗಪ್ಪ ಅಂಬಿ, ಈಶ್ವರ ಆದೇಪ್ಪನವರ ಇತರರಿದ್ದರು.
Published on

ಜಮಖಂಡಿ: ರಾಜ್ಯ ವಿಧಾನಮಂಡಲ ಅಧಿವೇಶನ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿದ ಕ್ರಮ ಖಂಡನೀಯ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು, ಕೂಡಲೇ ಈ ಸರ್ಕಾರ ವಜಾಗೊಳಿಸಬೇಕೆಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ಎ.ಜಿ ದೇಸಾಯಿ ವೃತ್ತದಲ್ಲಿ ಜಮಖಂಡಿ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಿ.ಟಿ. ರವಿ ಅವರ ಹೇಳಿಕೆ ತಿರುಚಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಅವರಿಗೆ ಆತಂಕವಾದಿ ಹಾಗೆ ರಾಜ್ಯ ಸರ್ಕಾರ ವರ್ತಿಸಿದ್ದು ಸರಿಯಾದ ಕ್ರಮವಲ್ಲ. ಈ ರೀತಿ ಗುಂಡಾ ವರ್ತನೆ ಸರ್ಕಾರ ಬಹಳಷ್ಟು ದಿನ ಉಳಿಯುವುದಿಲ್ಲ ಎಂದು ತಿಳಿಸಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆ ಗಾಳಿಗೆ ತೂರಿ ರಾಜ್ಯ ಮತ್ತು ರಾಷ್ಟ್ರ ನಾಯಕ ಸಿ.ಟಿ. ರವಿ ಅವರ ಮೇಲೆ ಕಾಂಗ್ರೆಸ್ ಸರ್ಕಾರ ಇಲ್ಲ ಸಲ್ಲದ ಆರೋಪ ಮಾಡಿ ಪೊಲೀಸರ ಕುಮ್ಮಕ್ಕಿನಿಂದ ದೌರ್ಜನ್ಯ, ಹಲ್ಲೆ ನಡೆಸಿರುವುದು ಇವರ ದುರಾಡಳಿತ ಎದ್ದು ಕಾಣಿಸುತ್ತದೆ ಎಂದರು.

ಸಂಸತ್ತಿನಲ್ಲಿ ಅಮಿತ್ ಷಾ ಅವರು ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಅದನ್ನು ವಿರೋಧಿಸಿ ತಳ್ಳಾಟ ನೂಕಾಟ ಮಾಡಿ ಸಂಸದರಿಗೆ ಗಾಯವಾಗುವ ರೀತಿಯಲ್ಲಿ ನಡೆದುಕೊಂಡಿದ್ದು ನಾಚಿಗೇಡು ಸಂಗತಿ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ. ಉಪಾಧ್ಯೆ, ಪ್ರಕಾಶ ಕಾಳೆ, ಯಮನೂರು ಮೂಲಂಗಿ, ಏಗಪ್ಪ ಸವದಿ, ನಾಗಪ್ಪ ಅಂಬಿ, ಈಶ್ವರ ಆದೇಪ್ಪನವರ, ಅಜಯ ಕಡಪಟ್ಟಿ, ಅರವಿಂದಗೌಡ ಪಾಟೀಲ, ಗಣೇಶ ಶಿರಗಣ್ಣವರ, ಶಂಕರ ಕಾಳೆ, ರಾಕೇಶ ಲಾಡ, ಶಶಿಕಾಂತ ವಿಶ್ವಬ್ರಾಹ್ಮಣ, ಸದಾಶಿವ ಕವಟಗಿ, ರಾಜುಗೌಡ ಪಾಟೀಲ, ಪ್ರಕಾಶ ಹುಗ್ಗೇನ್ನವರ, ರಮೇಶ ಆಲಬಾಳ, ಲಕ್ಕಪ್ಪ ಕಾತ್ರಾಳ, ಪರಶುರಾಮ ಬಿಸನಾಳ, ಉಮರ ಮುಲ್ಲಾ, ಶ್ರೀಧರ ಕಂಬಿ, ಅಡಿವೆಪ್ಪ ಮಾಂಗ, ದರೆಪ್ಪ ಆಲಗೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net