ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ

01-06-Shiva-3
ಸಚಿವ ಬಿ.ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್ ಶಂಕ್ರಪ್ಪ, ಪಕ್ಷದ ಪದಾಕಾರಿಗಳಾದ ಜಿ.ಶಂಕರರೆಡ್ಡಿ, ರವೀಂದ್ರ ಜಲ್ದಾರ್, ರಾಘವೇಂದ್ರ ಉಟ್ಕೂರು, ಮಲ್ಲಿಕಾರ್ಜುನ ಹಳ್ಳೂರು, ವಿಜಯಕುಮಾರ ಸಜ್ಜನ್, ನಾಗರಾಜ ಪಲಗುಲ, ರಾಮಚಂದ್ರ ಕಡಗೋಲ, ಯು.ನರಸಿಂಹಲು, ವಾಣಿಶ್ರೀ, ಅನಿತಾ ಮಂತ್ರಿ, ಶಾರದಾ ಹಿರೇಮಠ ಇದ್ದರು.
Published on

ರಾಯಚೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಸಚಿವರ ವೌಖಿಕ ಆದೇಶದ ಮೇರೆಗೆ ಹಣ ವರ್ಗಾವಣೆ ಮಾಡುವ ಮೂಲಕ ಅಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಸುಪ್ರೀಂ ಕೋರ್ಟ್ ನ್ಯಾಯಾೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ನಿಗಮದ 187 ಕೋಟಿ ರೂ.ಗಳನ್ನು ಬೇರೆಡೆ ವರ್ಗಾವಣೆ ಮಾಡುವ ಮೂಲಕ ಸರ್ಕಾರ ಮತ್ತು ಪರಿಶಿಷ್ಟರಿಗೆ ಮೋಸ ಮಾಡಲಾಗಿದೆ. ಬೇರೆ ರಾಜ್ಯದಲ್ಲಿನ ಖಾತೆಗಳಿಗೆ ವರ್ಗಾವಣೆಯಾಗಿರುವ ಹಣವನ್ನು ಹಿಂಪಡೆಯಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ಅಕಾರಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ನಿಗಮಕ್ಕೆ ಸೇರಿದ ಹಣವನನು ತೆಲಂಗಾಣದ ಮೂಲದ 15 ಖಾಸಗಿ ಸಂಸ್ಥೆಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಸಚಿವ ನಾಗೇಂದ್ರರ ಕೈವಾಡವಿದ್ದು, ಹಣ ದುರುಪಯೋಗ ಆರೋಪ ತನ್ನ ಮೇಲೆ ಬರುವ ಭಯದಿಂದ ಅಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಣ ದುರುಪಯೋಗ ಒಂದು ನಿಗಮಕ್ಕೆ ಸಿಮೀತವಾಗಿಲ್ಲ. ಸರ್ಕಾರ ಲೂಟಿಯಲ್ಲಿ ತೊಡಗಿದೆ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಸಚಿವರು ಹಾಗೂ ಇಲಾಖೆ ಅಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಎನ್ ಶಂಕ್ರಪ್ಪ, ಪಕ್ಷದ ಪದಾಕಾರಿಗಳಾದ ಜಿ.ಶಂಕರರೆಡ್ಡಿ, ರವೀಂದ್ರ ಜಲ್ದಾರ್, ರಾಘವೇಂದ್ರ ಉಟ್ಕೂರು, ಮಲ್ಲಿಕಾರ್ಜುನ ಹಳ್ಳೂರು, ವಿಜಯಕುಮಾರ ಸಜ್ಜನ್, ನಾಗರಾಜ ಪಲಗುಲ, ರಾಮಚಂದ್ರ ಕಡಗೋಲ, ಯು.ನರಸಿಂಹಲು, ವಾಣಿಶ್ರೀ, ಅನಿತಾ ಮಂತ್ರಿ, ಶಾರದಾ ಹಿರೇಮಠ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net