ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಿ

28-02-Shiva-3
ರಾಜ್ಯದ ಗಡಿಭಾಗದಲ್ಲಿ ಸಾಮರಸ್ಯ ಕದಡುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರ ಕನ್ನಡ ಕ್ರಿಯಾ ಸಮಿತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ನಡುಮನಿ, ಗೌರವಾಧ್ಯಕ್ಷ ರಫೀಕ್ ಅಹ್ಮದ್, ಪದಾಕಾರಿಗಳಾದ ಬಷೀರ್ ಅಹ್ಮದ್ ಹೊಸಮನಿ, ರಾಮಲಿಂಗಪ್ಪ ಕುಣ್ಸಿ, ಸಂಗಮೇಶ ಮಂಗಾನವರ ಇದ್ದರು.
Published on

ರಾಯಚೂರು: ರಾಜ್ಯದ ಗಡಿಭಾಗದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕಿ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಸಮಿತಿ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ಮಹಾರಾಷ್ಟ್ರ ಸರ್ಕಾರ ಸದಾಕಾಲ ಗಡಿ ಕುರಿತು ತಂಟೆ ತೆಗೆದು ಸಾಮಾಜಿಕ ಸಾಮರಸ್ಯ ಕದಡುವ ಕೆಲಸ ಮಾಡುತ್ತಾ ಬರುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಕನ್ನಡ ಭಾಷೆ ನಾಮಲಕ ನಿಯಮ ಜಾರಿಗೆ ತರಲು ಹೊರಟಿದ್ದು, ಮಹಾರಾಷ್ಟ್ರ ರಾಜ್ಯದ ಸರ್ಕಾರದ ನಿಯಮ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ನಮ್ಮ ರಾಜ್ಯದಲ್ಲಿನ ಸರ್ಕಾರದ ನಿರ್ಧಾರಗಳಿಗೆ ಮಹಾರಾಷ್ಟ್ರ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ.
ಕೇಂದ್ರ ಸರ್ಕಾರಕ್ಕೆ ಇವೆಲ್ಲವೂ ಗೊತ್ತಿದ್ದು ಸುಮ್ಮನಿದ್ದು, ರಾಷ್ಟ್ರಪತಿಗಳು ಕೂಡಲೇ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಿ ದೇಶದಲ್ಲಿ ಸಾಮರಸ್ಯ ಉಳಿಯುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ನಡುಮನಿ, ಗೌರವಾಧ್ಯಕ್ಷ ರಫೀಕ್ ಅಹ್ಮದ್, ಪದಾಕಾರಿಗಳಾದ ಬಷೀರ್ ಅಹ್ಮದ್ ಹೊಸಮನಿ, ರಾಮಲಿಂಗಪ್ಪ ಕುಣ್ಸಿ, ಸಂಗಮೇಶ ಮಂಗಾನವರ, ರಾಮಣ್ಣ ಮ್ಯಾದಾರ್, ಎಂ.ವೀರಭದ್ರಯ್ಯ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net