ಹಲ್ಲೆ ನಡೆಸಿದವರನ್ನು ಕೂಡಲೇ ವಜಾಗೊಳಿಸಿ: ಪ್ರಾಂತ ಕೃಷಿ ಕೂಲಿಕಾರರ ಸಮಿತಿ ಆಗ್ರಹ

protest
ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿದವರನ್ನು ವಜಾಗೊಳಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲೂಕು ಸಮಿತಿ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು
Published on

ಕೊಪ್ಪಳ: ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿದ ಗುಳದಳ್ಳಿ ಗ್ರಾಪಂ ಪಿಡಿಒ ಹಾಗೂ ಬಿಎಫ್‌ಟಿ ಸಿಬ್ಬಂದಿ ವಜಾಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲೂಕು ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ತಾಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪಿಡಿಒ, ಬಿಎಫ್‌ಟಿಯಿಂದ ಪ್ರತಿಭಟನಕಾರರಿಗೆ ಪ್ರಾಣ ಬೆದರಿಕೆ

ಗಬ್ಬೂರು ಗ್ರಾಮದ ಕೂಲಿಕಾರರಿಗೆ ನರೇಗಾದಡಿ ಸರಿಯಾಗಿ ಕೂಲಿ, ಕೆಲಸ ನೀಡದ ಕ್ರಮ ಖಂಡಿಸಿ ಜೂ.1ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಿಡಿಒ, ಬಿಎಫ್‌ಟಿ ಗಾಳೆಪ್ಪ ಹಾಗೂ ಸ್ಥಳೀಯರು ಸೇರಿ ಗಲಾಟೆ ಮಾಡಿ, ಹಲ್ಲೆ ನಡೆಸಿದ್ದು, ಪ್ರತಿಭಟನಕಾರರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ.
ಸರ್ಕಾರದ ಯೋಜನೆ ಪಡೆಯಲು ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಕೂಲಿ ಕೇಳಿಕೊಂಡು ಪಂಚಾಯಿತಿಗೆ ತೆರಳಿದರೆ ಸ್ಪಂದಿಸುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು.

ಕೂಡಲೇ ಪಿಡಿಒ ಹಾಗೂ ಬಿಎಫ್‌ಟಿ ಸಿಬ್ಬಂದಿಯನ್ನು ವಜಾಗೊಳಿಸಬೇಕು. ನಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ತಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು. ಪ್ರಮುಖರಾದ ಸುಂಕಪ್ಪ ಗದಗ, ರೇಣುಕಮ್ಮ, ಎಂ.ಬಸವರಾಜ, ಗಂಗಾಧರ ಸ್ವಾಮಿ, ಹುಸೇನಪ್ಪ, ಮರಿನಾಗಪ್ಪ, ರಮೇಶ ಬಡಗಿ, ಯಲ್ಲಪ್ಪ ಸಿಂಗನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net