

ಹಾವೇರಿ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 1.30 ಲಕ್ಷ ರೂ. ಮೌಲ್ಯದ ಎರಡು ಎತ್ತುಗಳನ್ನು ಯಾರೋ ಕಳ್ಳತನ ಮಾಡಿರು ಘಟನೆ ತಾಲೂಕಿನ ಯತ್ನಳ್ಳಿಯಲ್ಲಿ ನಡೆದಿದೆ.
ಮರ್ದಾನಸಾಬ ಮಹಬೂಬಸಾಬ ಹುಬ್ಬಳ್ಳಿ (38) ಎಂಬುವರ ಎತ್ತುಗಳು ಕಳ್ಳತನ ಆಗಿರುವುದು.
ಇವರು ತಮ್ಮ ಮನೆ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ರಾತ್ರಿ ಸಮಯದಲ್ಲಿ ಯಾರೋ ದುಷ್ಕಮಿರ್ಗಳು ಬಂದು ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.