ಬಂದ್‌ಗೆ ಕಳಸದಲ್ಲಿ ನೀರಸ ಪ್ರತಿಕ್ರಿಯೆ

29kls1
ಕಳಸದಲ್ಲಿ ಕರ್ನಾಟಕ ಬಂದ್ ಪ್ರತಿಭಟನೆ ವೇಳೆ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಕೈ ಕೊಯ್ದುಕೊಂಡಿರುವುದು.
Published on

ಕಳಸ: ಕರ್ನಾಟಕ ಬಂದ್‌ಗೆ ಕಳಸದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.
ಕಳಸ ಬಂದ್ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಡಾ. ರಾಜ್ ಕನ್ನಡ ಸಂಘ, ರೈತ ಸಂಘಗಳು ಮನವಿ ಮಾಡಕೊಂಡಿದ್ದರೂ, ಅಂಗಡಿ ಮುಂಗಟ್ಟುಗಳು, ಕಛೇರಿಗಳು, ಶಾಲಾ ಕಾಲೇಜಿಗಳು ಎಂದಿನಂತೆ ತೆರೆದಿದ್ದವು. ಡಾ.ರಾಜ್ ಕನ್ನಡ ಸಂಘ, ರೈತ ಸಂಘದ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಳಸ ಮಹಾವೀರ ವೃತ್ತದ ಸಮೀಪ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡ ದುಗ್ಗಪ್ಪ ಮಾತನಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಅನ್ಯಾಯ. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟು ಸೇರಿ ರಾಜಕೀಯ ಮರೆತು ಈ ನಾಡಿನ ಜನರಿಗೋಸ್ಕರ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಕನ್ನಡ ಸಂಘದ ಅಧ್ಯಕ್ಷ ರಾಜು ಮಾತನಾಡಿ, ಈ ನಾಡಿನ ಭಾಷೆ ನೆಲ, ಜಲದ ವಿಷಯ ಬಂದಾಗ ನಾವು ಪ್ರಾಣ ಕೊಟ್ಟಾದರೂ ಉಳಿಸುತ್ತೇವೆ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪೂರ್ಣೇಶ್, ಸಂತೋಷ್, ಅಣ್ಣಪ್ಪ, ಶ್ಯಾಮಚಾರ್,ರೈತ ಸಂಘದ ಮುಖಂಡರಾದ ಸವಿಂಜಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net