

ಉಡುಪಿ: ಆಗುಂಬೆ ಘಾಟಿಯಲ್ಲಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಶ್ರೀ ಡಿಪಿಆರ್ ತಯಾರಿಸಿ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರ್ಕಳ ರಸ್ತೆ ಕಾಮಗಾರಿ ವಿರುದ್ಧ ಮತ್ತೆ ಕೋರ್ಟ್ನಿಂದ ಸ್ಟೇ ಬಂದಿದೆ. ಇದನ್ನು ಶ್ರೀದಲ್ಲಿ ತೆರವುಗೊಳಿಸಬೇಕು. ಭೂ ಮಾಲೀಕರು ಪದೇ ಪದೇ ಕೋರ್ಟ್ನಿಂದ ಸ್ಟೇ ತರುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬಹಳಷ್ಟು ಅಡೆತಡೆಯಾಗುತ್ತಿದೆ. ಹೀಗಾಗಿ ಕಾಮಗಾರಿ ಪ್ರಾರಂಭಕ್ಕೆ ಮುನ್ನ ಹೈಕೋರ್ಟ್ನಲ್ಲಿ ಇಲಾಖೆ ವತಿಯಿಂದ ಕೇವಿಯಟ್ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಎಸ್ಆರ್ ದರಪಟ್ಟಿ ಏರಿಕೆ ಪ್ರಸ್ತಾವನೆ
ಪ್ರಧಾನಮಂತ್ರಿ ಜನಮನ್ ಯೋಜನೆಯಲ್ಲಿ ವಿವಿಧೋದ್ದೇಶ ಸಭಾಂಗಣಕ್ಕೆ 60 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದಿಂದ ಅನುಮೋದಿತ ನೆಗೆ ಹಣಕಾಸಿನ ಕೊರತೆಯಾಗುತ್ತಿದ್ದರೆ ಎಸ್ಆರ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಅಧಿಕಾರಿ ನಾರಾಯಣ ಸ್ವಾಮಿ, ಜಿಲ್ಲೆಯಲ್ಲಿ 186 ಕೊರಗರ ಹಾಡಿಗಳಿದ್ದು, ಒಟ್ಟು 18 ಎಂಪಿಸಿ ಕೇಂದ್ರಗಳು ಮಂಜೂರಾಗಿವೆ. 4 ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿದೆ. 3 ಕೇಂದ್ರಗಳ ಅಂದಾಜುಪಟ್ಟಿ ಮಂಜೂರಾತಿಗೆ ಸಲ್ಲಿಸಲಾಗಿದೆ. ಉಳಿದ 11 ಕೇಂದ್ರಗಳಿಗೆ ಜಮೀನು ಗುರುತಿಸಲಾಗಿದೆ. 3.73 ಲಕ್ಷ ರೂ. ವೆಚ್ಚದ 308 ಮನೆಗಳು ಹಾಗೂ 4.50 ಲಕ್ಷ ರೂ. ವೆಚ್ಚದ 100 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕೊರಗರ ಕುಟುಂಬಗಳಿಗೆ ಮನೆ ಮಂಜೂರು ಮಾಡಿದ್ದರೂ ಪಂಚಾಂಗ ವೆಚ್ಚವನ್ನೂ ಅವರಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಪಂಚಾಂಗವಾಗದಿದ್ದರೆ ಅನುದಾನ ಮಂಜೂರಾಗುವುದಿಲ್ಲ. ಇದಕ್ಕೆ ಇಲಾಖೆ ಬಳಿ ಯಾವುದೇ ಪರಿಹಾರೋಪಾಯಗಳಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿ ಸಂಸದ ಕೋಟ, ದಾನಿಗಳ ನೆರವಿನಿಂದ ತಳಪಾದ ವೆಚ್ಚ ಭರಿಸಿಕೊಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. 10 ದಿನದೊಳಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ಬಗ್ಗೆ ವಿಶೇಷ ಸಭೆ ಕರೆಯಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ್ ಶೆಟ್ಟಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ 613.17 ಕೋಟಿ ರೂ. ವೆಚ್ಚದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ 788 ಜನವಸತಿ ಪ್ರದೇಶ, 1600 ಕೋಟಿ ರೂ. ವೆಚ್ಚದಲ್ಲಿ ಕಾರ್ಕಳ, ಹೆಬ್ರಿ, ಕಾಪು ತಾಲೂಕಿನ 69 ಗ್ರಾಮಗಳಿಗೆ ವಾರಾಹಿ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದೆ. ಅನೇಕ ಕಡೆಗಳಲ್ಲಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪ್ರಾರಂಭಿಸಲು ಅರಣ್ಯ ಇಲಾಖೆ ಅನುಮತಿಗಾಗಿ ನಿರೀಸಲಾಗುತ್ತಿದೆ ಎಂದರು.
ಅರಣ್ಯ ಇಲಾಖೆ ಭೂತ ತೋರಿಸುತ್ತೀರಿ!
ಈ ಬಗ್ಗೆ ಪ್ರತಿಕ್ರಿಯಿಸಿ ಶಾಸಕ ಗುರುರಾಜ್ ಗಂಟಿಹೊಳೆ, ಜಲಜೀವನ್ ಮಿಷನ್ ಯೋಜನೆ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕಂದಾಯ ಜಮೀನಿನಲ್ಲಿಯೂ ಕಾಮಗಾರಿ ಪ್ರಾರಂಭಿಸುತ್ತಿಲ್ಲ. ಯಾವುದೇ ಪ್ರಶ್ನೆ ಕೇಳಿದರೆ ಅರಣ್ಯ ಇಲಾಖೆ ಭೂತ ತೋರಿಸುತ್ತಿದ್ದೀರಿ. ಅರಣ್ಯ ಇಲಾಖೆ ಅಧೀನದಲ್ಲಿರುವ ಜಮೀನು ಹೊರತುಪಡಿಸಿ ಉಳಿದ ಕಡೆ ಎಷ್ಟು ಕೆಲಸ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಉತ್ತತರಿಸಿದ ಜಿಪಂ ಸಿಇಒ ಪ್ರತಿಕ್ ಬಾಯಲ್, ಜಿಲ್ಲೆಯಲ್ಲಿ 220 ಹೊಸ ಓವರ್ಹೆಡ್ ನಿರ್ಮಿಸಲಾಗುತ್ತಿದ್ದು, 65 ಕಾಮಗಾರಿ ಪೂರ್ಣಗೊಂಡಿದೆ. 60 ಟ್ಯಾಂಕ್ಗಳು ಅರಣ್ಯ ಇಲಾಖೆ ಜಾಗದಲ್ಲಿ ಮಾಡಬೇಕಿದೆ. ಪ್ರಸ್ತುತ ಇರುವ 329 ಟ್ಯಾಂಕ್ಗಳಲ್ಲಿ 149 ಟ್ಯಾಂಕ್ಗಳನ್ನು ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಂಬದಕೋಣೆ ಸೀ&ುಡ್ ಪಾರ್ಕ್ಗೆ ಗುರುತಿಸಿ ಜಾಗದ ಬಗ್ಗೆ ಸ್ಥಳಿಯ ಸಂಸಂಸ್ಥೆಯೊಂದು ಅರಣ್ಯ ಇಲಾಖೆ ಜಾಗವೆಂದು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದೆ. ಆದರೆ ಈ ಜಾಗದಲ್ಲಿ ಅಕೇಶಿಯಾ ನಡುತೋಪು ಮಾತ್ರ ಬೆಳೆದಿದ್ದು, ಸ್ಥಳಿಯ ಗ್ರಾಪಂ ುಡ್ಪಾರ್ಕ್ಗೆ ಒಪ್ಪಿಗೆ ನೀಡಿ ಪೂರ್ಣ ಮಾಹಿತಿಯೊಂದಿಗೆ ರ್ನಿಣಯ ಮಾಡಿ ಕಳುಹಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ಸೆಪ್ಟಂಬರ್ನಲ್ಲಿ ಹೆಜಮಾಡಿ ಬಂದರು ಪೂರ್ಣ
ಮತ್ಸ$ ಸಂಪದ ಯೋಜನೆಯಲ್ಲಿ ಉಡುಪಿ ಬಂದರಿಗೆ 12.8 ಕೋಟಿ ರೂ. ಹಾಗೂ ಗಂಗೊಳ್ಳಿ ಬಂದರಿಗೆ 15 ಕೋಟಿ ರೂ. ಮಂಜೂರಾಗಿದ್ದು, ಸೆಪ್ಟಂಬರ್ ತಿಂಗಳೊಳಗೆ ಹೆಜಮಾಡಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿ ತಿಳಿಸಿದರು.
ಸಂಸದ ಕೋಟ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಂಡಿರುವ ಹೆಜಮಾಡಿ ಬಂದರು ಕಾಮಗಾರಿಯ ಪ್ರಗತಿಯನ್ನು ಹೆಚ್ಚಿಸಬೇಕು. ಭೂ ಸ್ವಾಧಿನ ಪರಿಹಾರಧನವನ್ನು ಜನರಿಗೆ ಆದಷ್ಟು ಬೇಗ ವಿತರಿಸಬೇಕು. ಕಾಮಗಾರಿ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ನೀಡಬೇಕು. ಹಂಗಾರಕಟ್ಟೆ, ಗಂಗೊಳ್ಳಿ ಹಾಗೂ ಮರವಂತೆಯಲ್ಲಿ ಕೋಸ್ಟಲ್ ರ್ಬತ್ ಅಭಿವೃದ್ಧಿ ಕಾಮಗಾರಿ ಹಾಗೂ ಹೊರಬಂದರು ವಿಸ್ತರಣಾ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದರು.
ಕಪು$್ಪ ಪಟ್ಟಿಗೆ ಸೇರಿಸಿ
ಗ್ರಾಮ ಸಡಕ್ ಯೋಜನೆಯಡಿ ನಿಮಾರ್ಣಗೊಂಡಿರುವ ಕಾಂಕ್ರೀಟ್ ರಸ್ತೆಗಳು ಕೆಲವು ಕಡೆಗಳಲ್ಲಿ ಹಾಳಾಗಿವೆ. ಸಾಮಾನ್ಯವಾಗಿ ಕಾಂಕ್ರೀಟ್ ರಸ್ತೆಗಳು ಹದಿನೈದು ವರ್ಷ ಬಾಳಿಕೆ ಬರಬೇಕು. ಆದರೆ, ಆರೇಳು ವರ್ಷದಲ್ಲಿಯೇ ರಸ್ತೆ ಹಾಳಾಗಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ನಿರ್ವಹಣಾ ಅವಧಿ ಮುಗಿದಿದ್ದರೂ ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಸರಿಪಡಿಸಬೇಕು. ಇಲ್ಲದಿದ್ದರೆ ಅಂಥವರನ್ನು ಕಪು$್ಪಪಟ್ಟಿಗೆ ಸೇರಿಸಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ , ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.