ದಿಶಾ ಸಮಿತಿ ಪುನರ್ ರಚನೆ, ಜಿಲ್ಲಾ ಮಟ್ಟದ ಸದಸ್ಯರು ಯಾರು ಗೊತ್ತಾ?

DISHA KAMEETY
Published on

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಅವುಗಳ ಕಾರ್ಯ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ಪುನರ್ ರಚಿಸಿ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಆದೇಶಿಸಿದ್ದಾರೆ.

ಸಮಿತಿಯಲ್ಲಿ ಓರ್ವ ಅಧ್ಯಕ್ಷರು, ಓರ್ವ ಸದಸ್ಯ ಕಾರ್ಯದರ್ಶಿ ಹಾಗೂ ಎಂಟು ವಿಧಾನ ಸಭೆ ಸದಸ್ಯರು, ಜಿಲ್ಲಾಧಿಕಾರಿ, ಮೇಯರ್, ಉಪಮೇಯರ್ ಮತ್ತಿತರರು ಸದಸ್ಯರು ಸಮಿತಿಯಲ್ಲಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಸಂಸದ ರಮೇಶ ಜಿಗಜಿಣಗಿ, ಸದಸ್ಯ ಕಾರ್ಯದರ್ಶಿಯಾಗಿ ಸಿಇಒ ರಿಷಿ ಆನಂದ ಇದ್ದಾರೆ.

ಇನ್ನುಳಿದಂತೆ ಜಂಬಗಿಯ ಗ್ರಾಪಂ ಅಧ್ಯಕ್ಷ ಶ್ರೀಶೈಲ ಮಸೂತಿ, ಯಂಕಂಚಿ ಗ್ರಾಪಂ ಅಧ್ಯಕ್ಷ ಬಸವರಾಜ ಶರಣಪ್ಪ ಅಳ್ಳಗಿ, ಸಾರವಾಡ ಗ್ರಾಪಂ ಅಧ್ಯಕ್ಷ ಮಲಕನಗೌಡ ಶಂ.ಪಾಟೀಲ, ಮದಭಾವಿ ಗ್ರಾಪಂ ಅಧ್ಯಕ್ಷೆ ಸುಜಾತಾ ಶಂಕರ ಚಲವಾದಿ, ಗುಬ್ಬೇವಾಡ ಗ್ರಾಪಂ ಅಧ್ಯಕ್ಷೆ ಶಾರದಾಬಾಯಿ ಸಿದ್ದಪ್ಪ ಮರಗೂರ, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಿಂದ ಕಾಶೀರಾಗೌಡ ಬಿರಾದಾರ, ಪರಿಶಿಷ್ಟ ಜಾತಿಯಿಂದ ಸುನೀಲ ಎಸ್.ಸಂದ್ರಿಮನಿ, ಪರಿಶಿಷ್ಟ ಪಂಗಡದಿಂದ ರವಿಕಾಂದ ಅರ್ಜುನ ವಗ್ಗೆ, ಮಹಿಳಾ ವರ್ಗದಿಂದ ಸುಮಂಗಲಾ ದೇ.ಕೋಟಿ ಮತ್ತಿತರರು ನಾಮ ನಿರ್ದೇಶನಗೊಂಡಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net