

ಕೆಜಿಎಫ್: ನಗರದ ಹೃದಯಭಾಗದಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಗರದ ಒಳ ಚರಂಡಿ ನೀರು ಹರಿಯುತ್ತಿದ್ದು, ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಡಕಾಗಿದೆ. ಕಳೆದ6 ತಿಂಗಳಿನಿಂದ ಸಮಸ್ಯೆ ಉದ್ಬವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿದಿಲ್ಲ.
ಕಾಲೇಜಿನ ಕಾಂಪೌಂಡ್ ಗೋಡೆಯಿಂದ ಒಳಾಂಗಣಕ್ಕೆ ಹರಿಯುವ ತ್ಯಾಜ್ಯ ನೀರು ಇಡೀ ಆವರಣದಲ್ಲಿ ನಿಂತಿದ್ದು, ಸರ್ಕಾರಿ ಜ್ಞಾನದೇಗುಲವೊಂದು ಸೊಳ್ಳೆ, ನೊಣಗಳ ಉತ್ಪತ್ತಿ ತಾಣವಾಗಿ ರೂಪುಗೊಂಡಿದೆ. ನೀರು ದಾಟಿಕೊಂಡೇ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಒಳ ಹೋಗಬೇಕಾದ ದುಸ್ಥಿತಿ ಬಂದೊದಗಿದೆ.
ಪ್ರತಿನಿತ್ಯ ಗಬ್ಬು ವಾಸನೆಯಲ್ಲಿ ಉಸಿರಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿ ಹಲವು ವಿದ್ಯಾರ್ಥಿಗಳಿಗೆ ಜ್ವರ ಬಂದು ಚಿಕಿತ್ಸೆ ಪಡೆದುಕೊಂಡಿದ್ದು, ಜೀವ ಭಯದಲ್ಲಿ ದಿನ ದೂಡುವಂತಾಗಿದೆ.
ಮಲೇರಿಯಾ, ಡೆಂ, ಚಿಕೂನ್ಗುನ್ಯಾ, ಟೈಫಾಯಿಡ್ನಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕೊಳಚೆ ನೀರಿನ ಪಕ್ಕದಲ್ಲಿಯೇ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿತ್ಯ ತರಗತಿ ಕೋಣೆಗೆ ನಡೆದುಕೊಂಡು ಹೋಗಬೇಕಾಗಿದೆ. ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ರಾಜ್ಯ ಸರ್ಕಾರ ಕೋಟ್ಯಂತರ ರೂ.ವ್ಯಯಿಸುತ್ತಿದ್ದರೂ, ವೆಚ್ಚವೆಲ್ಲವೂ ಕಡತಗಳಲ್ಲಿ ಉಳಿದಿದೆಯೇ ಹೊರತೂ, ಸೌಲಭ್ಯಗಳು ಮಾತ್ರ ಕಾರ್ಯಗತವಾಗಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಳೆದ ತಿಂಗಳು ಈ ಕುರಿತು ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ೇತ್ರ ಶಿಕ್ಷಣಾಧಿಕಾರಿ, ನಗರಸಭೆ ಪೌರಾಯುಕ್ತ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ನಗರಸಭೆ ಪೌರಾಯುಕ್ತ ಆಂಜನೇಯಲು ಶಾಲೆಯ ಕಾಂಪೌಂಡ್ ಒಳಗೆ ಹರಿಯುತ್ತಿರುವ ಒಳ ಚರಂಡಿ ನೀರು ನಿಲ್ಲಿಸಿ, ಕಾಂಪೌಂಡ್ನ ಹೊರಗೆ ಕಾಂಪೌಂಡ್ನ ಪಕ್ಕದಲ್ಲಿ ಬೇರೆ ಪೈಪ್ ಲೈನ್ ಅಳವಡಿಸಿ ಶಾಲಾ ಆವರಣಕ್ಕೆ ನೀರು ಪ್ರವೇಶಿಸದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು.
ಅಂದಿನ ಪ್ರಭಾರ ಬಿಇಒ ಮಂಜುನಾಥ್ ಸ್ಥಳ ಪರಿಶೀಲಿಸಿ, ನಗರಸಭೆಯಿಂದ ನೀರು ಹರಿಯುವುದನ್ನು ನಿಲ್ಲಿಸಿ ಆವರಣದಲ್ಲಿ ಬೆಳೆದಿರುವ ಹುಲ್ಲು ಕಿತ್ತು, ಆ.19ರಿಂದ ಪ್ರಾರಂಭವಾಗುವ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಮೈದಾನ ಸಿದ್ಧಗೊಳಿಸುವುದಾಗಿ ತಿಳಿಸಿದವರು ಇತ್ತ ಸುಳಿದೇ ಇಲ್ಲ.
ಅಧಿಕಾರಿಗಳು, ನಗರಸಭೆಯವರದ್ದು ಕೇವಲ ಭರವಸೆಗಳಾಗಿ ಉಳಿದುಕೊಂಡಿದ್ದು, ಶಾಲಾ ಕಾಂಪೌಂಡ್ನ ಒಳಗೆ ಹರಿಯುತ್ತಿರುವ ಒಳ ಚರಂಡಿ ನೀರು ಇನ್ನೂ ಹರಿಯುತ್ತಿದ್ದು, ನೀರು ಹರಿಯುತ್ತಿರುವ ಜಾಗದಲ್ಲಿ ಆಳೆತ್ತರಕ್ಕೆ ಹುಲ್ಲು ಬೆಳೆದಿದೆ.
ಇನ್ನು ಈ ಬಾರಿಯ ಆ.19ರಂದು ಇದೇ ಆವರಣದಲ್ಲಿ ನಡೆಯಬೇಕಿದ್ದ ತಾಲೂಕುಮಟ್ಟದ ಕ್ರೀಡಾಕೂಟವನ್ನು ಮೈದಾನದ ಪರಿಸ್ಥಿತಿ ತಿಳಿದು ಕೆಲವೇ ಕೆಲವು ಕ್ರೀಡೆಗಳನ್ನು ನಡೆಸಿ ಕೈ ತೊಳೆದುಕೊಂಡಿದು, ಉಳಿದ ಸ್ಪರ್ಧೆಗಳನ್ನು ನಗರಸಭೆ ಮೈದಾನದಲ್ಲಿ ನಡೆಸಿರುವುದರಿಂದಲೇ ಅರ್ಥವಾಗುತ್ತದೆ ಶಾಲಾ ಆವರಣ ಎಷ್ಟು ಮಲಿನವಾಗಿತ್ತು ಎನ್ನುವುದು.
ಕಳೆದ 6 ತಿಂಗಳಿನಿಂದ ಒಳ ಚರಂಡಿ ನೀರು ಶಾಲಾ ಕಾಂಪೌಂಡ್ ಆವರಣದಲ್ಲಿ ಹರಿಯುತ್ತಿದ್ದು, ಸರಿಪಡಿಸುವಂತೆ ಹಲವು ಬಾರಿ ಪತ್ರ ವ್ಯವಹಾರ ಮಾಡಿ ಎರಡ್ಮೂರು ಬಾರಿ ಖುದ್ದಾಗಿ ನಗರಸಭೆಗೆ ಭೇಟಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದ್ದು, ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.
- ಗಾಯತ್ರಿ
ಉಪ ಪ್ರಾಂಶುಪಾಲೆ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಕೆಜಿಎಫ್
ಕಳೆದ ತಿಂಗಳ 19 ರಿಂದ ನಡೆಯಬೇಕಾಗಿದ್ದ ತಾಲೂಕುಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಕಾಲೇಜು ಆವರಣದಲ್ಲಿ ಒಳ ಚರಂಡಿ ನೀರು ಹರಿಯುತ್ತಿದ್ದುದರಿಂದ ನಗರಸಭಾ ಮೈದಾನಕ್ಕೆ ಸ್ಥಳಾಂತರ ಮಾಡಿಕೊಂಡು ನಡೆಸಬೇಕಾಯಿತು. ಒಳ ಚರಂಡಿ ನೀರನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು ಒಂದು ತಿಂಗಳಾಗಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ತಿಳಿಸಲಾಗುವುದು.
> ಅನಿತಾ
ೇತ್ರ ಶಿಕ್ಷಣಾಧಿಕಾರಿ, ಕೆಜಿಎಫ್ ತಾಲೂಕು