ರೋಗ ಶಮನಕ್ಕೆ ಯೋಗಾಭ್ಯಾಸ ರಾಮಬಾಣ

29gokak1---balchandraaaaaaaaaaaaa-Web
ಗೋಕಾಕ ತಾಲೂಕಿನ ಮನ್ನಿಕೇರಿ ಹೊರವಲಯದಲ್ಲಿ ಸಿದ್ಧ ಸಮಾಧಿ ಯೋಗದ ತರಬೇತಿ ಕೇಂದ್ರ ಕಟ್ಟಡಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಹನುಮಂತ, ಲಕ್ಕಪ್ಪ ಕೊರಕಪೂಜೇರಿ ಇತರರು ಉಪಸ್ಥಿತರಿದ್ದರು.
Published on

ಗೋಕಾಕ: ಯೋಗ ಹಾಗೂ ಪ್ರಾಣಾಯಾಮದಿಂದ ಮಾತ್ರ ದೀರ್ಘಕಾಲಿಕ ರೋಗಗಳನ್ನು ಬೇರು ಸಮೇತ ತೆಗೆದು ಹಾಕಲು ಸಾಧ್ಯವಿದೆ. ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಗುರುದೇವ ದತ್ತ ಯೋಗಾ ಫೌಂಡೇಷನ್ ಆಶ್ರಯದಲ್ಲಿ ಭಾನುವಾರ ಸಿದ್ಧ ಸಮಾಧಿ ಯೋಗ(ಎಸ್‌ಎಸ್‌ವೈ) ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಿದ್ಧ ಸಮಾಧಿ ಯೋಗ ತರಬೇತಿ ಕೇಂದ್ರಕ್ಕೆ ವೈಯಕ್ತಿಕವಾಗಿ 6 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಸಿದ್ಧ ಸಮಾಧಿ ಯೋಗ ಶಿಬಿರವನ್ನು ನಾಡಿನಾದ್ಯಂತ ಪಸರಿಸಲು ಋಷಿ ಪ್ರಭಾಕರ ಗುರೂಜಿ ಕೊಡುಗೆ ಅನನ್ಯವಾಗಿದೆ. ಇದರಿಂದ ಪ್ರೇರಣೆಗೊಂಡು ದೇಶದ ಉದ್ದಗಲಕ್ಕೂ 10 ವರ್ಷ ಯೋಗದ ಅಧ್ಯಯನ ಮಾಡಿ ಭಗವಾನ್ ವಿಶ್ವೇಶ್ವರ ಗುರುಗಳ ಆಶೀರ್ವಾದದಿಂದ ಮೌನವಾಗಿ ತಪಸ್ಸು ಮಾಡಿದ ಕೀರ್ತಿ ಪ್ರಭಾಕರ ಗುರೂಜಿ ಅವರಿಗೆ ಸಲ್ಲುತ್ತದೆ ಎಂದರು. ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಹನುಮಂತ ಗುರುಗಳು 4 ಲಕ್ಷ ರೂ. ಸಂಗ್ರಹಿಸಿರುವುದು ಶ್ಲಾಘನೀಯ ಸಂಗತಿ ಎಂದು ಶ್ಲಾಘಿಸಿದರು. ಹನುಮಂತ ಗುರು ಮಾತನಾಡಿದರು. ಗುರುಸಿದ್ಧ ಗುರು, ಶಿದ್ಲಿಂಗ ಕಂಬಳಿ, ರವಿ ಪರುಶೆಟ್ಟಿ, ಶಾಂತಪ್ಪ ಹಿರೇಮೇತ್ರಿ, ಸುಭಾಸ ಕೌಜಲಗಿ, ಮುದಕಪ್ಪ ಗೋಡಿ, ಸತ್ಯಪ್ಪ ಗಡಾದ, ಬಾಳಪ್ಪ ಗೌಡರ, ಕೆಂಪಣ್ಣ ಚೌಕಾಶಿ, ಲಕ್ಷ್ಮಣ ಸಂಕ್ರಿ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಗುರುಪಾದ ರಾಮಣ್ಣಿ, ಬಸು ನಾಯ್ಕರ, ಲಕ್ಕಪ್ಪ ಕೊರಕಪೂಜೇರಿ, ಮಹಾಂತಯ್ಯ ಹಿರೇಮಠ ಇತರರು ಇದ್ದರು. ಶಾಸಕರನ್ನು ಹನುಮಂತ ಹಾಗೂ ಗುರುಸಿದ್ಧ ಗುರುಗಳು ಸತ್ಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net