ರೋಗ ತಡೆಗೆ ಬಿಸಿಜಿ ಲಸಿಕೆ

8katakol1
Published on

ಕಟಕೋಳ: ಯರೋಗ ತಡೆಗಟ್ಟುವ ಸದುದ್ದೇಶದಿಂದ ವಯಸ್ಕರು, ಮಧು ಮೇಹಿ, ಧೂಮಪಾನಿ, ಯರೋಗ ಸಂಪರ್ಕಿತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬಿಸಿಜಿ ಲಸಿಕೆ ನೀಡಲಾಗುವುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಣಾಧಿಕಾರಿ ವಿ.ಎಸ್​.ಯರಗುದ್ರಿ ತಿಳಿಸಿದರು. ಸಮೀಪದ ಚುಂಚನೂರ ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಯಸ್ಕರ ಬಿಸಿಜಿ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯ ಶೇಕಣ್ಣ ಹುರಕಡ್ಲಿ, ಎ.ವೈ.ಗೋಡಿ, ಪಿಡಿಒ ಸಿ.ಎಂ.ಮಾಳಗಿ, ಯರೋಗ ಮೇಲ್ವಿಚಾರಕ ಎಸ್​.ಎಂ.ಹೊಸೂರ, ಸಮುದಾಯ ಆರೋಗ್ಯಾಧಿಕಾರಿ ಪ್ರಕಾಶ ಕುಂಬಾರ, ಪ್ರಾಥಮಿಕ ಆರೋಗ್ಯ ಸುರಣಾಧಿಕಾರಿ ಬಾಳವ್ವ ತಳವಾರ ಹಾಗೂ ಆಶಾ ಕಾರ್ಯತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net