ರೋಗಗಳ ನಿರ್ಮೂಲನೆಗೆ ಸ್ವಚ್ಛತೆ ಅಗತ್ಯ

ಅಳವಂಡಿ ಸಮೀಪದ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಲೇರಿಯಾ, ಡೆಂೆ ಜ್ವರ ನಿಯಂತ್ರಣ ಕುರಿತು ಜಾಗೃತಿ ಜಾಥಾ ನಡೆಯಿತು. ಪ್ರಮುಖರಾದ ಕಾಶಪ್ಪ, ಗವಿಸಿದ್ದಪ್ಪ, ವೀರಣ್ಣ, ಯಲ್ಲಮ್ಮ ಇತರರಿದ್ದರು.
ಅಳವಂಡಿ ಸಮೀಪದ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಲೇರಿಯಾ, ಡೆಂೆ ಜ್ವರ ನಿಯಂತ್ರಣ ಕುರಿತು ಜಾಗೃತಿ ಜಾಥಾ ನಡೆಯಿತು. ಪ್ರಮುಖರಾದ ಕಾಶಪ್ಪ, ಗವಿಸಿದ್ದಪ್ಪ, ವೀರಣ್ಣ, ಯಲ್ಲಮ್ಮ ಇತರರಿದ್ದರು.
Published on

ಅಳವಂಡಿ: ಮಲೇರಿಯಾ, ಡೆಂೆ ರೋಗ ನಿರ್ಮೂಲನೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಿ ಎಂದು ಆರೊಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹಳ್ಳಿ ಹೇಳಿದರು.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಲೇರಿಯಾ, ಡೆಂೆ ಜ್ವರ ನಿಯಂತ್ರಣ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.

ಡೆಂೆ ಜ್ವರಕ್ಕೆ ಕಾರಣವಾಗುವ ಈಡೀಸ್ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ವಾರಕ್ಕೊಮ್ಮೆ ನೀರಿನ ಪರಿಕರಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಮುಚ್ಚಿ ಇಡಬೇಕು. ಮುನ್ನೆಚ್ಚರಿಕೆ ವಹಿಸಿದರೆ ಸೊಳ್ಳೆಗಳ ಉತ್ಪತ್ತಿ ನಿಲ್ಲಲಿದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಳ್ಳಿ ಮಾತನಾಡಿ, ಡೆಂೆ ಜ್ವರ ಪ್ರಮುಖವಾಗಿ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಅಧಿಕವಾಗಿ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಮಕ್ಕಳಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಡೆಂೆ, ಮಲೇರಿಯಾ ಹಾಗೂ ಲಾರ್ವಾ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿ ಶಾಲಾ ಕಾಲೇಜುಗಳಲ್ಲಿ ಈಡೀಸ್ ಲಾರ್ವಾ ಮುಕ್ತಗೊಳಿಸೋಣ ಎಂದರು.

ಮುಖ್ಯಶಿಕ್ಷಕ ವೀರಣ್ಣ ಮಟ್ಟಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಯಲ್ಲಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಅಸ್ಮಾ, ರೇಷ್ಮಾ, ಆಶಾ ಕಾರ್ಯಕರ್ತೆ ಉಮಾ, ಶಿಕ್ಷಕರಾದ ಕಾಶೀನಾಥ, ಶುಭಮಂಗಳ, ಹಂಪಮ್ಮ, ಗೌತಮಿ, ರವಿಕುಮಾರ, ಶಿಲ್ಪಾ, ಅಡುಗೆ ಸಹಾಯಕರಾದ ಮಹಾಲಕ್ಷ್ಮೀ, ರೇಣುಕಾ, ರೇಣವ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net