ರೋಗ ಪತ್ತೆಯಲ್ಲಿ ಲ್ಯಾಬ್ ಪಾತ್ರ ಮುಖ್ಯ

26Manju6
ಬೆಳಗಾವಿ ನಗರದ ಐಸಿಎಂಆರ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಂದು ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸುಬರ್ನಾ ರಾಯ್, ಡಾ. ಶ್ರೀನಿವಾಸ ಎಸ್.ಆರ್. ಡಾ.ಹರೀಶ ಡಿ.ಆರ್. ಇತರರಿದ್ದರು.
Published on

ಬೆಳಗಾವಿ: ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಸೇರಿ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿರುವ ವಿವಿಧ ಸಾಂಕ್ರಾಮಿಕ ರೋಗಗಳನ್ನು ಗುರುತಿಸುವಲ್ಲಿ ಪ್ರಯೋಗಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಐಸಿಎಂಆರ್-ಎನ್‌ಐಟಿಎಂ ನಿರ್ದೇಶಕ ಡಾ.ಸುಬರ್ನಾ ರಾಯ್ ಹೇಳಿದರು.
ನಗರದ ಐಸಿಎಂಆರ್ ಸಭಾಂಗಣದಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯದ ಡಿಎಸ್‌ಐ, ಟಿಎಚ್‌ಒ, ಐಡಿಎಸ್‌ಪಿ ಅಧಿಕಾರಿಗಳಿಗೆ, ಸೂಕ್ಷ್ಮ ಜೀವಶಾಸಜ್ಞ, ಸಾಂಕ್ರಾಮಿಕ ರೋಗ ಶಾಸಜ್ಞರಿಗಾಗಿ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ (ಐಸಿಎಂಆರ್), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎನ್‌ಐಟಿಎಂ) ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರೋಗಗಳ ಕಣ್ಗಾವಲಿನಲ್ಲಿ ಪ್ರಾಯೋಗಾಲಯಗಳ ಪಾತ್ರ’ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

ಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ನಿಯಂತ್ರಿಸುವಲ್ಲಿ ಆರೋಗ್ಯ ಅಧಿಕಾರಿಗಳ ಪಾತ್ರ ದೊಡ್ಡದಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಜತೆಗೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಯೋಗಾಲಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂತಹ ರೋಗಗಳ ವಿಷಯದಲ್ಲಿ ಏಕಾಏಕಿ ಚಿಕಿತ್ಸೆ ನೀಡುವುದು ಕಷ್ಟದ ಕೆಲಸ ಎಂದು ಹೇಳಿದರು.

ರಾಜ್ಯ ಸಾಂಕ್ರಾಮಿಕ ರೋಗ ತಜ್ಞ ಡಾ. ಶ್ರೀನಿವಾಸ ಎಸ್.ಆರ್.ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ರೋಗಗಳ ದತ್ತಾಂಶ ಸಂಗ್ರಹ ಮತ್ತು ಏಕಾಏಕಿ ದಾಖಲೀಕರಣ ಮಾಡುವ ಮುನ್ನ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅವಶ್ಯ ಎಂದು ತಿಳಿಸಿದರು.

ಐಸಿಎಂಆರ್-ಎನ್‌ಐಟಿಎಂ ವಿಜ್ಞಾನಿ ಡಾ.ಹರೀಶ ಡಿ.ಆರ್. ಮಾತನಾಡಿ, ರೋಗಗಳ ಮಾದರಿ ಸಂಗ್ರಹಣೆ, ಸಾಗಣೆ ಮತ್ತು ಶೇಖರಣೆಯಲ್ಲಿ ಪ್ರತಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ತುರ್ತು ಕೆಲಸವಾಗಿದೆ. ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದರು. ಪುಣೆ ವಿಜ್ಞಾನಿ ಡಾ.ರಿಮಾ ಸಹಾಯ್ ಅವರು ಏಕಾಏಕಿ ತನಿಖೆಯ ಸಮಯದಲ್ಲಿ ಜೈವಿಕ ಸುರಕ್ಷತೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಕುರಿತು ಮಾತನಾಡಿದರು.
ವಿಜ್ಞಾನಿ ಡಾ.ಕಮ್ರಾನ್ ಜಮಾನ್, ಬಿಐಎಂಎಸ್ ನಿರ್ದೇಶಕ ಡಾ.ಅಶೋಕಕುಮಾರ್ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಶೋಭಾ ಮೂಲಿಮನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net