ಕಾಯಿಲೆ ನಿವಾರಣೆಗೆ ಸಹಕಾರ ಅಗತ್ಯ- ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಹೇಳಿಕೆ

Alavandi Tuberculosis Free Day
ಅಳವಂಡಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಮಾತನಾಡಿದರು.
Published on

ಅಳವಂಡಿ: ಕ್ಷಯರೋಗ ಮುಕ್ತವಾಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಹೇಳಿದರು. ಗ್ರಾಮದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಕ್ಷಯರೋಗದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಪ್ರತಿಯೊಂದು ಮನೆಗಳಿಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಬೇಕು. 2025ರ ಒಳಗೆ ಕ್ಷಯರೋಗಮುಕ್ತ ದೇಶವಾಗಿಸಲು ಪಣತೊಡಲಾಗಿದೆ. ಹೀಗಾಗಿ ಎಲ್ಲರೂ ಶ್ರಮಿಸಬೇಕು. ಕ್ಷಯರೋಗ ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದೆ ಎಂದರು.

ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ, ಆರೋಗ್ಯ ಸುರಕ್ಷಿತಾಧಿಕಾರಿ ಸಾವಿತ್ರಿ ಹಂಚಿನಾಳ, ಅಂಗನವಾಡಿ ಕಾರ್ಯಕರ್ತೆಯರಾದ ಮರಿಬಸಮ್ಮ, ಅಕ್ಕಮ್ಮ, ಲಲಿತಾ, ಲಕ್ಷ್ಮೀ, ನಾಗರತ್ನಾ, ಪುಷ್ಪಾ, ಅನ್ನಪೂರ್ಣಾ, ಲಲಿತಾ, ಹನುಮಕ್ಕ, ಸಾವಿತ್ರಿ, ಮಹಾದೇವಿ, ಹುಲಿಗೇಮ್ಮ, ಪಕೀರಮ್ಮ, ಶಿವಗಂಗಾ, ಸುಮಂಗಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net