ರೋಗ ದೂರ ಮಾಡಲು ಯೋಗಾಸನ ಸಹಕಾರಿ

21MDL3
Published on

ಮೂಡಲಗಿ: ಮಾನವ ಶರೀರದ ರೋಗ ದೂರಮಾಡುವ ಯೋಗ ಪಾರಂಪರಿಕ ಚಿಕಿತ್ಸೆ ಪದ್ಧತಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಮೂಡಲಗಿ ಶಿಣ ಸಂಸ್ಥೆ ಆವರಣದಲ್ಲಿ ಕೇಂದ್ರ ಆಯುಷ್​ ಸಚಿವಾಲಯ, ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನವದೆಹಲಿ, ತಾಲೂಕಾಡಳಿತ, ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ ಸಂಸ್ಥೆ ಕಲ್ಲೋಳಿ, ಮೂಡಲಗಿ ಶಿಣ ಸಂಸ್ಥೆ ಹಾಗೂ ವಿವಿಧ ಸಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಐದು ಸಾವಿರ ವರ್ಷಗಳಿಂದ ಭಾರತೀಯ ನೆಲದ ಋಷಿಮುನಿಗಳಿಂದ ಯೋಗಾಭ್ಯಾಸ ಪ್ರಾರಂಭವಾಗಿದೆ. ಕಳೆದ 11 ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಕಾಳಜಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಿನ ಆಚರಿಸಲಾಗುತ್ತಿದೆ ಎಂದರು.

ಭಾರತ ಸರ್ಕಾರದ ಹಸಿರು ಯೋಗ ಪರಿಕಲ್ಪನೆ ಅಂಗವಾಗಿ ಸಸಿ ನೆಡಲಾಯಿತು. ಮೂಡಲಗಿ ಶಿಣ ಸಂಸ್ಥೆ ಅಧ್ಯ ವೆಂಕಟೇಶ ಸೋನವಾಲ್ಕರ, ನಿರ್ದೇಶಕರಾದ ವಿಜಯ ಸೋನವಾಲ್ಕರ, ಮುಖಂಡರಾದ ಶಿವಬಸು ಹಂದಿಗುಂದ, ನಿಂಗಪ್ಪ ಫಿರೋಜಿ, ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಈಶ್ವರ ಮುರಗೋಡ, ಈರಪ್ಪ ಢವಳೇಶ್ವರ, ಸದಾಶಿವ ನೇರ್ಲಿ, ಶಿವಾನಂದ ಮಗದುಮ್ಮ, ಪ್ರಾಚಾರ್ಯ ಎಸ್​.ಎಲ್​.ಚಿತ್ರಗಾರ, ಮಹಾಂತೇಶ ಪಾಟೀಲ, ಮಲ್ಲಪ್ಪ ಕಂಕಣವಾಡಿ, ಪರಪ್ಪ ಗಿರೆಣ್ಣವರ, ಶ್ರೀಶೈಲ ಪೂಜೇರಿ, ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net