ರೋಗ ಪೀಡಿತ ಗಿಡಗಳನ್ನು ಕಿತ್ತಿ ಎಸೆಯಿರಿ

11 tvg 01
ತಾವರಗೇರಾ ಹೋಬಳಿ ವ್ಯಾಪ್ತಿ ಜಮೀನಿನಲ್ಲಿ ಹಾಕಿದ ತೊಗರಿ ಬೆಳೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು. ಪ್ರಮುಖರಾದ ಅಜ್ಮೀರ ಅಲಿ, ಆಶಾ ರಾಠೋಡ, ವೀರನಗೌಡ, ಅಮರೇಗೌಡ ಇದ್ದರು.
Published on

ತಾವರಗೇರಾ: ಹೋಬಳಿ ವ್ಯಾಪ್ತಿ ಅನೇಕ ಗ್ರಾಮಗಳ ರೈತರ ಜಮೀನುಗಳಲ್ಲಿ ಹಾಕಿರುವ ತೊಗರಿ ಬೆಳೆಗೆ ಸೆಟೆರೋಗ ಮತ್ತು ಸಿಡಿರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಿಸಲು ರೈತರು ಜಾಗೃತರಾಗಬೇಕು ಎಂದು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆಶಾ ರಾಠೋಡ ಹೇಳಿದರು.

ಸಮೀಪದ ಇದ್ಲಾಪೂರ ಗ್ರಾಮದ ರೈತರಾದ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿದರು. ಸಿಡಿರೋಗಕ್ಕೆ ಒಂದು ಲೀಟರ್ ನೀರಿಗೆ 5 ಗ್ರಾಂ. ಟ್ರೇಕೊಡೆರಮಾ ಪುಡಿ ಬೆರೆಸಿ ಕಾಂಡದ ಕೆಳಗೆ ಹಸಿಯಾಗುವವರೆಗೆ ಸುರಿಯಬೇಕು. ಒಂದು ಲೀಟರ್ ನೀರಿಗೆ 5 ಗ್ರಾಂ. ಕಾರ್ಬಂಡ ಜಿಮ್ ಬೆರೆಸಿ ಕಾಂಡದ ಕೆಳಗೆ ಹಾಕಬೇಕು.

ಪೂರ್ಣ ಪ್ರಮಾಣದ ರೋಗ ಪೀಡಿತ ಗಿಡಗಳನ್ನು ಕಿತ್ತಿ ದೂರ ಎಸೆಯಬೇಕು. ಅಂದಾಗ ಮಾತ್ರ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದರು.
ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರ ಅಲಿ, ಟೆಕ್ನಿಕಲ್ ಸಹಾಯಕ ವೀರನಗೌಡ, ರೈತರಾದ ಬಸನಗೌಡ, ಅಮರೇಗೌಡ, ಯಮನಪ್ಪ ಹಾಗೂ ಸಿಬ್ಬಂದಿ ಇದ್ದರು.

ಹೋಬಳಿ ವ್ಯಾಪ್ತಿಯಲ್ಲಿ 7070 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತಲಾಗಿದೆ. ಹೆಚ್ಚು ಮಳೆಯಾದ ಕಾರಣ ಬೆಳೆಗೆ ಸೆಟೆರೋಗ ಕಂಡುಬಂದಿದೆ. ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.ಆಶಾ ರಾಠೋಡ ಕೃಷಿ ಅಧಿಕಾರಿರೈತ ಸಂಪರ್ಕ ಕೇಂದ್ರ ತಾವರಗೇರಾ

ಕುಷ್ಟಗಿ ತಾಲೂಕಿನಲ್ಲಿ ಹೆಚ್ಚುವರಿಯಾಗಿ ತೊಗರಿ ಬಿತ್ತನೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ತೊಗರಿ ಬೆಳೆಗಳಿಗೆ ಸೆಟೆರೋಗ ಆವರಿಸಿದೆ. ರೋಗನಿರೋಧಕ ಔಷಧಿಗಳ ಬಗ್ಗೆ ರೈತರಿಗೆ ತಿಳಿಸಲಾಗಿದೆ.ಅಜ್ಮೀರ ಅಲಿತಾಲೂಕು ಕೃಷಿ ಸಹಾಯಕ ನಿರ್ದೇಶಕ ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net