

ಶನಿವಾರಸಂತೆ: ಹಂಡ್ಲಿ ಗ್ರಾಪಂ ವ್ಯಾಪ್ತಿಯ ಗುಡುಗಳಲೆ ಗ್ರಾಮದ ಜಯದೇವ ಜಾನುವಾರು ಜಾತ್ರಾ ಮೈದಾನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣದ ಕುರಿತು ಸಮಿತಿಯ ಪ್ರಮುಖರು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿದರು.
ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಸಮೀಪ ಪುತ್ಥಳಿ ನಿರ್ಮಾಣ ಮಾಡಲು ನಿರ್ಣಯಿಸಲಾಗಿರುವ ಬಗ್ಗೆ ಸಂಸದರೊಂದಿಗೆ ಚರ್ಚಿಸಲಾಯಿತು. ನಿಯೋಗದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಬಿ.ಕೆ.ಮೂರ್ತಿ, ಪ್ರಮುಖರಾದ ಕೆ.ಪಿ.ಮಂಜುನಾಥ್ ಕೊಡ್ಲಿಪೇಟೆ, ಗಿರೀಶ್ ಬೆಸೂರು, ರವಿಕುಮಾರ್ ಸಂಪಿಗೆದಾಳು ಇತರರು ಇದ್ದರು.