ಸಿವಿಲ್ ಇಂಜಿನಿಯರಿಂಗ್ ವಿಭಾಗ ತೆರೆಯಲು ಚರ್ಚೆ

17-kollegal-2,,, (
ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 13.14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಂಪ್ಯೂಟರ್ ಲ್ಯಾಬ್‌ಅನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಶನಿವಾರ ಉದ್ಘಾಟನೆ ಮಾಡಿದರು. ಬಿ.ತೋಟೇಶ್, ಕಲ್ಲೇಶ್ ಇತರರು ಇದ್ದರು.
Published on

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 13.14 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಂಪ್ಯೂಟರ್ ಲ್ಯಾಬ್‌ಅನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಶನಿವಾರ ಉದ್ಘಾಟನೆ ಮಾಡಿದರು.


8 ಕೋಟಿ ರೂ. ವೆಚ್ಚದಲ್ಲಿ ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆಗೆ ಹಿಂದಿನ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಕೆಎಸ್‌ಐಐಡಿಸಿ (ಖನಿಜ ನಿಗಮ) ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಂ.ಆರ್.ರವಿ ಅವರು 13 ಕಂಪ್ಯೂಟರ್ ಹಾಗೂ 1 ಲ್ಯಾಪ್‌ಟಾಪ್ ಅನ್ನು ಸಿಎಸ್‌ಆರ್ ಅನುದಾನದಲ್ಲಿ ಕೊಡುಗೆ ಆಗಿ ನೀಡಿದ್ದಾರೆ. ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿ 5.68 ಲಕ್ಷ ರೂ. ಬೆಲೆಯ 12 ಕಂಪ್ಯೂಟರ್ ಹಾಗೂ 1 ಪ್ರಿಂಟರ್‌ಅನ್ನು ಸಿಎಸ್‌ಆರ್ ಅನುದಾನದಲ್ಲಿ ಕಾಲೇಜಿಗೆ ನೀಡಿದ್ದಾರೆ. ಅಂತೆಯೇ, 2023-24 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ 2.46 ಲಕ್ಷ ರೂ. ಬೆಲೆಯ ಯುಪಿಎಸ್ ನೀಡಿದ್ದೇನೆ. ಇಂದು ಅಧಿಕೃತವಾಗಿ ಕಂಪ್ಯೂಟರ್ ಲ್ಯಾಬ್‌ಗೆ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡು ಮೌಲ್ಯಯುತ ಜೀವನವನ್ನು ಕಟ್ಟಿಕೊಳ್ಳಬೇಕು ಎಂದರು.


ಈಗಾಗಲೇ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗವಿದೆ. ಪ್ರಾಂಶುಪಾಲರು ಸಿವಿಲ್ ಇಂಜಿನಿಯರಿಂಗ್ ವಿಭಾಗ ತೆರೆಯಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಜತೆ ಚರ್ಚಿಸುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಪ್ರಭುಪ್ರಸಾದ್, ಸಮಿತಿ ಸದಸ್ಯ ರಾಜೇಂದ್ರ ಮೋಳೆ, ಕುಂತೂರು ಪಿಡಿಇ ಮಲ್ಲೇಶ್, ಕಾಲೇಜು ಪ್ರಾಂಶುಪಾಲ ಕಲ್ಲೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net