ನಾಥಪಂಥ ಜೋಗಿ ಮಹಾಸಂಸ್ಥಾನ ಮಠದ ನಿರ್ಮಾಣ ಚರ್ಚೆ

h2-jogisamaja
Published on

ಹುಬ್ಬಳ್ಳಿ: ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃಧ್ಧಿ ಮಹಾಮಂಡಳ ವತಿಯಿಂದ ಸಮೀಪದ ತಾರಿಹಾಳದ ಶ್ರೀಗುರು ಗೋರಕ್ಷನಾಥ ಸಮುದಾಯ ಭವನದಲ್ಲಿ ಭಾನುವಾರ ನಾಥಪಂಥ ಜೋಗಿ ಮಹಾಸಂಸ್ಥಾನ ಮಠದ ನಿರ್ಮಾಣದ ವಿಷಯವಾಗಿ ಚರ್ಚಿಸಲಾಯಿತು.

ಧಾರವಾಡ ಬೆಳಗಾವಿ, ಹಾವೇರಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ಆಗಮಿಸಿದ್ದ ಗಣ್ಯರು, ಸಲಹೆ, ಸೂಚನೆ ನೀಡಿದರು. ಶ್ರೀಮಠದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯಹಸ್ತ ಚಾಚುವುದಾಗಿ ಒಪ್ಪಿಗೆ ಸೂಚಿಸಿದರು.

ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃಧ್ಧಿ ಮಹಾಮಂಡಳದ ಅಧ್ಯಕ್ಷ ಎಸ್.ಡಿ. ಮಧೂರಕರ, ಕಾರ್ಯಾಧ್ಯಕ್ಷ ಡಾ.ಕೆ. ಜಗದೀಶ, ಕಾರ್ಯದರ್ಶಿ ಕುಮಾರಸ್ವಾಮಿ ಬೆಂಗಳೂರ, ಶ್ರೀಕೃಷ್ಣ ಇಳಕಲ್, ವಿಠ್ಠಲ ಜೋಗೇರ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net