ಶ್ವಾಸಕೋಶ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ನೀಡುವುದರ ಚರ್ಚೆ

h16-kims
Published on

ಹುಬ್ಬಳ್ಳಿ: ಭಾರತೀಯ ಅರಿವಳಿಕೆ ತಜ್ಞರ (ಐಎಸ್‌ಎ) ರಾಷ್ಟ್ರೀಯ ಶಾಖೆ, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅರಿವಳಿಕೆ ವಿಭಾಗ, ಧಾರವಾಡ ಎಸ್‌ಡಿಎಂ ವೈದ್ಯಕೀಯ ಕಾಲೇಜ್ ಸಹಯೋಗದಲ್ಲಿ ನಗರದ ಕಿಮ್ಸ್‌ನ ನೃಪತುಂಗ ಸಭಾಂಗಣದಲ್ಲಿ ಒಂದು ದಿನದ ನಿರಂತರ ವೃತ್ತಿಪರ ಶಿಕ್ಷಣ ಕುರಿತ ಕಾರ್ಯಾಗಾರವನ್ನು ಭಾನುವಾರ ಏರ್ಪಡಿಸಲಾಗಿತ್ತು.
ಬೆಳಗಿನ ಅಧಿವೇಶನದಲ್ಲಿ ನೀತಿ ಬೋಧಕ ಉಪನ್ಯಾಸ, ಸಂಕೀರ್ಣವಾದ ಶ್ವಾಸಕೋಶ ಶಸ್ತ್ರಚಿಕಿತ್ಸೆಗಳಿಗೆ ಅರಿವಳಿಕೆ ನೀಡುವ ವಿಧಾನದ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ 80 ಪ್ರತಿನಿಧಿಗಳಿಗೆ ಕಾರ್ಯಾಗಾರ ನಡೆಯಿತು.
ಅರಿವಳಿಕೆ ತಜ್ಞರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 200 ಪ್ರತಿನಿಧಿಗಳು ಆಗಮಿಸಿದ್ದರು. ಕಿದ್ವಾಯಿ ಸ್ಮಾರಕ ಆಸ್ಪತ್ರೆ, ಬೆಂಗಳೂರಿನ ಶ್ರೀ ಸತ್ಯಸಾಯಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆ, ನಾಗಪುರದ ಏಮ್ಸ್‌ನ ಅರಿವಳಿಕೆ ಶಾಸ್ತ್ರಜ್ಞರು ಆಗಮಿಸಿದ್ದರು.
ಐಎಸ್‌ಎ ರಾಷ್ಟ್ರೀಯ ಕಾರ್ಯದರ್ಶಿ ಡಾ. ಸುಖಮಿಂದರ್‌ಜಿತ್ ಸಿಂಗ್ ಬಾಜ್ವಾ, ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ವೈದ್ಯಕೀಯ ಅಧೀಕ್ಷಕ ಡಾ. ರಾಜಾಶಂಕರ ಎಸ್., ಅರಿವಳಿಕೆ ವಿಭಾಗದ ಮುಖ್ಯಸ್ಥೆ ಡಾ. ಮಾಧುರಿ ಕುರ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net