ಜೈನ ಸಾಧು-ಸಂತರ ಸುರಕ್ಷತೆಗೆ ಚರ್ಚೆ

h16-Jain Lad 1
Published on

ಹುಬ್ಬಳ್ಳಿ: ರಾಷ್ಟ್ರ ಸಂತ, ಆಚಾರ್ಯ ಸಾಮ್ರಾಟ ಶ್ರೀ ಆನಂದ ಋಷಿಜಿ ಮಹಾರಾಜರ 123ನೇ ಜಯಂತ್ಯುತ್ಸವ ನಿಮಿತ್ತ ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ, ಆಲ್ ಇಂಡಿಯಾ ಶ್ವೇತಾಂಬರ ಸ್ಥಾನಕವಾಸಿ ಜೈನ್ ಕಾನ್ಪರೆನ್ಸ್ ಹುಬ್ಬಳ್ಳಿ -ಧಾರವಾಡ ಜಿಲ್ಲಾ ಘಟಕ ಮತ್ತು ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್​ನ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ನಗರದ ಕಂಚಗಾರ ಗಲ್ಲಿಯ ಮಹಾವೀರ ಭವನದಲ್ಲಿ ಬುಧವಾರ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಕಾರ್ವಿುಕ ಸಚಿವ ಸಂತೋಷ ಲಾಡ್, ಜೈನ ಧರ್ಮವು ಅಹಿಂಸೆ, ದಾನ, ಧರ್ಮ, ಮಾನವೀಯ ಸೇವೆಗಳನ್ನು ಕೈಗೊಳ್ಳುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ಜೈನ ಧರ್ಮದ ಸಾಧು-ಸಂತರ ಸಂಪರ್ಕದಲ್ಲಿದ್ದ ಮಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗ ಅನುಸರಿಸಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಜೈನ ಸಾಧು-ಸಾಧಿ್ವುರು ವಿಹಾರದಲ್ಲಿರುವಾಗ ಅವರ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ ಮತ್ತು ರಾತ್ರಿ ವೇಳೆ ತಂಗಲು ವಿಶ್ರಾಂತಿ ಗೃಹಗಳ ವ್ಯವಸ್ಥೆ ಕಲ್ಪಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಈ ಕುರಿತು ಗೃಹ ಮಂತ್ರಿ ಡಾ. ಜಿ. ಪರಮೇಶ್ವರ ಅವರೊಂದಿಗೆ ರ್ಚಚಿಸುವುದಾಗಿ ತಿಳಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಜೈನ ಸಮಾಜದವರು ಮಾಡುವ ಮಾನವೀಯ ಸೇವಾ ಕಾರ್ಯಗಳ ಕುರಿತು ಪ್ರಶಂಸಿದರು. ಜೈನ ಸಮಾಜದ ಏಳ್ಗೆಗೆ ಸದಾ ಸಿದ್ಧ ಎಂದು ಹೇಳಿದರು.

ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಮುಖ್ಯಸ್ಥ ಉಕಚಂದ ಬಾಫ್ನಾ, ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಜೈನ ಸಾಧು-ಸಂತರ ಸುರಕ್ಷತೆ ಕುರಿತು ರಾಜ್ಯ ಸರ್ಕಾರ ಚಿಂತನೆ ಮಾಡಬೇಕು. ರಾಜಸ್ಥಾನ ಸರ್ಕಾರ ಮಾಡಿದ ಶ್ರಮನ ಆಯೋಗದ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು ಎಂದು ವಿನಂತಿಸಿದರು.

ಸಾಧಿ್ವ ಪ್ರಜ್ಞಾ ಕಿರಣ, ವಾಗ್ಮಿ ಶ್ರೀ ವಿಪುಲ ದರ್ಶನಾಜಿ ಮಹಾರಾಜ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಜೈನ ಕಾನ್ಪರೆನ್ಸ್ ಅಧ್ಯಕ್ಷ ಬಾಬುಲಾಲ್ ಪಾರೇಖ ಅಧ್ಯಕ್ಷತೆ ವಹಿಸಿದ್ದರು.

123 ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು. ಜೈನ್ ಕಾನ್ಪರೆನ್ಸ್ ಕರ್ನಾಟಕ ಪ್ರಾಂತಿಯ ಮಂತ್ರಿ ಪ್ರಕಾಶಚಂದ ಕಟಾರಿಯಾ, ಹುಬ್ಬಳ್ಳಿ ಅಧ್ಯಕ್ಷ ಮಗರಾಜ ಭಲಗಟ್, ಹುಬ್ಬಳ್ಳಿ ಯುವ ಘಟಕದ ಅಧ್ಯಕ್ಷ ಕಮಲೇಶ ಭಾಗರೇಚಾ, ಶಿಬಿರದ ಚೇರ್ಮನ್ ಪಿಂಟು ಸಂಘವಿ, ಹುಬ್ಬಳ್ಳಿ-ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಸ್ಥಾನಕವಾಸಿ ಸಮಾಜ ಹುಬ್ಬಳ್ಳಿ ಕಾರ್ಯಾಧ್ಯಕ್ಷ ಗೌತಮ ಬುರಟ್, ಸಂಪತರಾಜ ಕಟಾರಿಯಾ, ಚಗನರಾಜ ಬುರಟ್, ಘಿಸುಲಾಲ ಕಟಾರಿಯಾ, ಕಾಂತಿಲಾಲ ಬೊಹರಾ, ಮಹೇಂದ್ರ ವಿನಾಯಕೀಯಾ, ಪಾರಸಮಲ ಪಟವಾ, ಮುಖೇಶ ಭಂಡಾರಿ, ಗೌತಮ ಗುಲೇಚ್ಛಾ, ಅಶೋಕ ಕೋಠಾರಿ, ನಿರ್ಮಲ ಜೈನ್, ಮಹಾವೀರ ಕುಂದೂರ, ಗೌತಮ ಬಾಫ್ನಾ, ಜೀತೇಂದ್ರ ಪೋರವಾಲ, ಸುಶೀಲ ಕಟಾರಿಯಾ, ಅಮೃತಲಾಲ ಚಾಜೇಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net