

ತೀರ್ಥಹಳ್ಳಿ: ತಾಲೂಕಿನ ದಬ್ಬಣಗದ್ದೆ ಸಮೀಪದ ಅಂದಗೇರಿ ಗ್ರಾಮದಲ್ಲಿ ೧೪೦೪ನೇ ಇಸವಿಯ ವಿಜಯನಗರ ಕಾಲದ ಶಿಲಾಶಾಸನವೊಂದು ಬುಧವಾರ ಪತ್ತೆಯಾಗಿದೆ.
ಸ್ಪಷ್ಟ ಬರಹದ ಸುಮಾರು ೫೫ ಸಾಲಿನ ಈ ದಾನ ಶಾಸನ ಎಪಿಗ್ರಾಫಿಯಾ ಕರ್ನಾಟಕ ಗ್ರಂಥದಲ್ಲಿ ದಾಖಲಾಗಿದೆ. ದಬ್ಬಣಗದ್ದೆ ಭಾಗದ ಹಲವು ಗ್ರಾಮಗಳ ಹೆಸರು ಉಲ್ಲೇಖಿಸಲಾಗಿದ್ದು, ಈಗಲೂ ಕೆಲ ಪ್ರದೇಶಗಳ ಹೆಸರು ಚಾಲ್ತಿಯಲ್ಲಿದೆ. ಮಾಳೂರು, ಕೂಡಿಗೆ ಮೊದಲಾದ ಊರುಗಳ ಹೆಸರು ಇದೆ. ೫ ಅಡಿ ಎತ್ತರ, ೨.೫ ಅಡಿ ಅಗಲದ ಶಾಸನದಲ್ಲಿ ಮೊದಲ ೩ ಸಾಲುಗಳು ಪ್ರಾರ್ಥನಾ ಶ್ಲೋಕದಿಂದ ಕೂಡಿವೆ. ಮೇಲ್ಭಾಗದಲ್ಲಿ ಗೋವು, ವಾಮನ, ಸೂರ್ಯ ಚಂದ್ರರ ಕೆತ್ತನೆಗಳಿವೆ. ಸಮೀಪದಲ್ಲಿ ಅರೆಯುವ ಕಲ್ಲು ಮತ್ತಿತರ ಕಲ್ಲು ಕಂಡುಬAದಿವೆ.
ಇದರೊಂದಿಗೆ ಇಷ್ಟು ವರ್ಷ ಮಣ್ಣಿನಡಿ ಮುಚ್ಚಿಹೋಗಿದ್ದ ದಬ್ಬಣಗದ್ದೆಯ ಇತಿಹಾಸದ ಪುರಾವೆಯೊಂದು ಬೆಳಕಿಗೆ ಬಂದAತಾಗಿದೆ. ಈ ಶಾಸನದ ಪತ್ತೆಗೆ ಸಹಕರಿಸಿದ್ದು ಒಬ್ಬ ವಿದ್ಯಾರ್ಥಿ ಎಂಬುದು ಕುತೂಹಲಕರ ಸಂಗತಿ. ದಬ್ಬಣಗz್ದೆ ಶಾಲಾ ವಿದ್ಯಾರ್ಥಿ ಅಭಯ ನೀಡಿದ ಮಾಹಿತಿ ಆಧರಿಸಿ ಹೋದಾಗ ಅಚ್ಚರಿ ಕಾದಿತ್ತು. ಜತೆಗೆ ಪ್ರೀತಮ್, ಶ್ರೆಯಸ್ ಸಹಕರಿಸಿದರು. ಮಣ್ಣಿನಡಿ ಹೂತುಹೋಗಿದ್ದರೂ ಅದರಲ್ಲಿ ಒಂದP್ಷÀರವೂ ಶಿಥಿಲವಾಗಿಲ್ಲ. ಸಂಶೋಧಕ, ಶಿಕ್ಷಕ ಎಲ್.ಎಸ್.ರಾಘವೇಂದ್ರ ದಬ್ಬಣಗದ್ದೆಯ ತಮ್ಮ ಶಾಲೆಗೆ ಸಮೀಪವಿದ್ದ ಈ ಶಾಸನದ ಅಧ್ಯಯನ ನಡೆಸಿದರು.
ಶಾಸನದಲ್ಲೇನಿದೆ?
ಈ ಭಾಗದ ಇತಿಹಾಸ ಹೇಳುವ ಅದ್ಭುತ ಶಾಸನ ಇದಾಗಿದ್ದು, ವಿಜಯನಗರ ಸಾಮಂತ ವಿಠಣ್ಣ ವೊಡೆಯರ್ ೧೪೦೪ರಲ್ಲಿ ಆರಗವನ್ನು ಆಳುತ್ತಿದ್ದರು. ಆಗ ಪ್ರಮುಖರಾಗಿದ್ದ ಮಾಳೂರು ಕೇಶವದೇವ ಹೆಗ್ಗಡೆ ಮುಂತಾದವರು ಇಂಗಳೇಶ್ವರದ ಮಾಯಣ್ಣ ಮತ್ತವರ ಮಕ್ಕಳಿಗೆ ರಾವುನಾಡಿನ ಒಳಗಿನ ಕೊಬಡೆ ಈಗಿನ ಗಬಡಿ ಗ್ರಾಮಕ್ಕೆ ಸೇರಿದ ಹೊರಬಯಲ ಗ್ರಾಮದ ಕೊಣಕೆಯ್ಯ ಕೊಡಿಗೆಯಲ್ಲಿ ಭೂಮಿಯನ್ನು ದಾನವಾಗಿ ನೀಡಿದ ಮಾಹಿತಿ ಈ ಶಾಸನದಲ್ಲಿದೆ. ಕೇಶವ ಹೆಗ್ಗಡೆ ಅವರ ತಾಯಿ ಹೆಸರಲ್ಲಿ ನಾಗಲಾಪುರ ಅಗ್ರಹಾರ ನಿರ್ಮಿಸಲು ಆರಗದ ಕಲಿನಾಥ ದೇವರ ಸಮ್ಮುಖದಲ್ಲಿ ಸುತ್ತ ೬೦ ಹಳ್ಳಿಯ ಸಮಸ್ತರು ಸೇರಿ ಈ ಭೂದಾನ ನೀಡಿದ್ದರು ಎನ್ನುವ ಮಾಹಿತಿ ಇದೆ.