ಮನಸಿನ ಕಲ್ಮಶ ಕಳೆಯಲು ಪ್ರವಚನ ಸಹಕಾರಿ

LXR PRAVACHAN
Published on

ಲಕ್ಷೆ್ಮೕಶ್ವರ: ಸಂತರು, ಶರಣರು, ಮಹಾತ್ಮರ ಜೀವನ ಚರಿತ್ರೆ ಬದುಕಿಗೆ ದಾರಿದೀಪವಾಗಿದ್ದು, ಅವರ ಜೀವನ ವೃತ್ತಾಂತ ಆಲಿಸುವುದರಿಂದ ಮನಸಿನ ಕಲ್ಮಶಗಳು ಕಳೆಯುತ್ತವೆ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಹೂವಿನಶಿಗ್ಲಿ ಮಠದ 46ನೇ ಜಾತ್ರಾ ಮಹೋತ್ಸವ ಮತ್ತು ಲಿಂ. ನಿರಂಜನ ಸ್ವಾಮೀಜಿಗಳ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮುಳಗುಂದದ ಬಾಲಲೀಲ ಮಹಾಂತ ಶಿವಯೋಗಿಗಳ ಪುರಾಣ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಂತರಂಗದಲ್ಲಿ ಪ್ರೀತಿ, ದಯೆ, ಕರುಣೆ, ದಾನ, ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳು ಒಡಮೂಡಲು ಮಹಾತ್ಮರ ಜೀವನ ಚರಿತ್ರೆ ಅರಿಯಬೇಕು. ಅವು ಕತ್ತಲು ಕವಿದ ಬದುಕಿಗೆ ಬೆಳಕಿದ್ದಂತೆ. ಮುಳಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತ್ರೆ ಸನ್ಮಾರ್ಗದ ದೀವಿಗೆಯಾಗಿದ್ದು, ಈ ಪುರಾಣ ಕಾರ್ಯದಲ್ಲಿ ಪಾಲ್ಗೊಂಡು ಕೆಲ ತತ್ವ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಹೊಸವರ್ಷದಿಂದ ಪ್ರಾರಂಭಿಸಿರುವ ಪ್ರವಚನದಲ್ಲಿ ಹೂವಿನಶಿಗ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಕದಮನಹಳ್ಳಿಯ ಪಂಚಾಕ್ಷರಿ ಶಾಸ್ತ್ರಿಗಳು ಪ್ರವಚನವನ್ನು ಹಾಗೂ ಅನಿಲಕುಮಾರ ಮಠಪತಿ ಹಾಗೂ ಬಾಲಾಜಿ ಸಂಗೀತ ಸೇವೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net