ಮುತ್ತಗಿಯಲ್ಲಿ ಇಂದಿನಿಂದ ಪ್ರವಚನ

Published on

ಗೊಳಸಂಗಿ: ಸಮೀಪದ ಮುತ್ತಗಿ ಗ್ರಾಮದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ 87 ನೇ ಪುಣ್ಯಾರಾಧನೆ ಮತ್ತು ಜಾತ್ರಾ ಮಹೋತ್ಸವ ನಿಮಿತ್ತ ಅಂಗವಾಗಿ ಸಂಸ್ಥಾನ ಹಿರೇಮಠದಲ್ಲಿ ಮಾ.30 ರಿಂದ ಏ.9 ರವರೆಗೆ ಪ್ರವಚನ ನಡೆಯಲಿದೆ.

ತಾಳಿಕೋಟೆ ಸಂಸ್ಥಾನ ವಿಭೂತಿಮಠದ ಪುರಾಣ ಕೇಸರಿ ಮಹಾಂತ ದೇವರು ನಾಲತವಾಡದ ವೀರೇಶ್ವರ ಶರಣರ ಜೀವನ ಚರಿತ್ರೆಯ ಕುರಿತು ಪ್ರವಚನ ನೀಡಲಿದ್ದಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮದ ವಿನೋದಕುಮಾರ ಹೂಗಾರ ಹಾಮೋರ್ನೀಯಂ, ಬಾಲಾಜಿ ಕಟ್ಟಿಸಂಗವಿ ತಬಲಾ ಸಾಥ ನೀಡಲಿದ್ದಾರೆ. ಸ್ಥಳಿಯ ಪಟ್ಟದೇವರಮಠದ ವೀರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಪ್ರತಿದಿನ ಬೆಳಿಗ್ಗೆ 7ಕ್ಕೆ ಪಟ್ಟದೇವರಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯರ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಪೂಜಾ ಕಾರ್ಯಕ್ರಮವನ್ನು ಅಪ್ಪುಸ್ವಾಮಿ ಹಿರೇಮಠ ಮತ್ತು ಸಹೋದರರು ನೆರವೇರಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net