

ಚಿಕ್ಕೋಡಿ: ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅರಿವು ಮೂಡಿಸುವ ಉದ್ದೇಶದಿಂದ ಹಬ್ಬ, ಜಾತ್ರೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಾಲಟ್ಟಿಯಲ್ಲಿ ಶ್ರೀಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳಲ್ಲಿ ಮಾನವೀಯ ವೌಲ್ಯ ಬೆಳೆಯುವಂತೆ ಮಾಡುವುದು ಪ್ರವಚನದ ಆಶಯವಾಗಿದೆ ಎಂದರು.
ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸಂಪಾದನಾ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಪ್ರವಚನಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಅನ್ನದಾಸೋಹ ಜತೆಗೆ ಜ್ಞಾನ ದಾಸೋಹ ನೀಡುತ್ತಿರುವ ಲಕ್ಷ್ಮೀದೇವಿ ಜಾತ್ರಾ ಕಮಿಟಿ ಕಾರ್ಯ ಶ್ಲಾಘನೀಯ ಎಂದರು.
ಶ್ರೀಕಾಂತ ಚನ್ನವರ, ಸಂತೋಷ ಜೋಗುಳೆ, ವಿಶ್ವನಾಥ ಕಾಮಗೌಡ, ಸುರೇಶ ಪಟ್ಟಿ, ಸಂಜಯ ಚನ್ನವರ, ಅಶೋಕ ಚನ್ನವರ, ದತ್ತಾ ಬನನ್ನವರ, ಗಣಪತಿ ದೊಡಮನಿ, ಶಂಕರ ಬನನ್ನವರ, ಅಶೋಕ ಪೂಜಾರಿ, ರಮೇಶ ಪೂಜಾರಿ ಇತರರು ಇದ್ದರು. ಭೀಮಸೇನ ಚನ್ನವರ ಸ್ವಾಗತಿಸಿದರು. ಮಲ್ಲೇಶ ಲಿಂಬಿಗಿಡದ ನಿರೂಪಿಸಿದರು.