ಗುರು ತೋರಿದ ದಾರಿಯಲ್ಲಿ ಸಾಗಿ

21ard01 a
ಔರಾದ್ ತಾಲೂಕಿನ ರಕ್ಷಾಳ(ಕೆ)-ನಿಟ್ಟೂರ್ (ಕೆ) ಮಧ್ಯದ ಶ್ರೀ ವಿವೇಕ ಆಶ್ರಮದಲ್ಲಿ ಗುರುಪೂರ್ಣಿಮೆ ನಿಮಿತ್ತ ಸಾರೋಟಿನಲ್ಲಿ ಶ್ರೀ ಮುರಳೀಧರ ಮಹಾರಾಜರ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಪಾಂಡುರಂಗ ಕಣಜೆ, ಧನಾಜಿ, ಅಶೋಕ, ಗೋವಿಂದ, ಶಿವಾಜಿರಾವ ಕಾಳೆ, ಯೋಗೇಶ ಪಾಟೀಲ್, ಗೋರಖ ನಿಟ್ಟೂರೆ, ದಿಲೀಪ ಕಾಳೆ, ಶಿವಕುಮಾರ ಮೇತ್ರೆ, ಬಾಬುರಾವ ದಳಪತಿ, ಸಂತೋಷ ಮನಶೆಟ್ಟೆ, ಜಗನ್ನಾಥ ಹಲ್ಲಾಳೆ, ಜಗದೀಶ ವಲ್ಲಾಪುರೆ ಇತರರಿದ್ದರು.
Published on

ಔರಾದ್: ಗುರುಬ್ರಹ್ಮ , ಗುರುವಿಷ್ಣು, ಗುರುದೇವೋ ಮಹೇಶ್ವರಾ! ಗುರು ಸಾಕ್ಷಾತ್ ಪರಬ್ರಹ್ಮ, ತಸ್ಕೈ ಶ್ರೀ ಗುರುವೇ ನಮಃ ಅನ್ನುವಂತೆ ಶಿಶ್ಯರು ಗುರುವಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡು ಅವರ ಹಾಕಿಕೊಟ್ಟ ದಾರಿಯಲ್ಲಿ ಬದುಕು ಸಾಗಿಸುವುದೇ ಗುರುಪೂರ್ಣಿಮೆಯ ಮಹತ್ವಾದಾಗಿದೆ ಎಂದು ಶ್ರೀ ವಿವೇಕ ಆಶ್ರಮದ ಶ್ರೀ ಮುರಳೀಧರ ಮಹಾರಾಜರು ನುಡಿದರು.

ರಕ್ಷಾಳ(ಕೆ)-ನಿಟ್ಟೂರ್ (ಕೆ) ಮಧ್ಯದ ಶ್ರೀ ವಿವೇಕ ಆಶ್ರಮದಲ್ಲಿ ಪ್ರವಚನ ನೀಡಿದ ಅವರು, ಗುರುವಿನ ಮೂಲಕ ಭಗವಂತನು ಎಲ್ಲ ಶಿಷ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾರೆ. ಗುರುಗಳು ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೇ ಉದಾರ ಮನಸ್ಸಿನಿಂದ ಶಿಷ್ಯರ ಬಗ್ಗೆ ಕಾಳಜಿ ವಹಿಸುವ ಗುಣವುಳ್ಳವರಾಗಿರುತ್ತಾರೆ. ಆಧುನಿಕ ಯುಗದಲ್ಲಿ ಗುರು-ಶಿಷ್ಯರ ಸಂಬಂಧಗಳು ತೀರಾ ಕಡಿಮೆಯಾಗುತ್ತಿರುವುದು ಕಳವಳವನ್ನು ಸೃಷ್ಟಿಸಿದೆ. ದಿನಾಲು ಗುರುಗಳ ಪಾದಪೂಜೆ ಮಾಡಿ ಶಿಷ್ಯರು ಮತ್ತೊಮ್ಮೆ ತಾವೇ ಗುರುಗಳಿಗೆ ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು.

ಪಾಂಡುರಂಗ ಕಣಜೆ, ಧನಾಜಿ, ಅಶೋಕ, ಗೋವಿಂದ, ಶಿವಾಜಿರಾವ ಕಾಳೆ, ಯೋಗೇಶ ಪಾಟೀಲ್, ಗೋರಖ ನಿಟ್ಟೂರೆ, ದಿಲೀಪ ಕಾಳೆ, ಶಿವಕುಮಾರ ಮೇತ್ರೆ, ಬಾಬುರಾವ ದಳಪತಿ, ಸಂತೋಷ ಮನಶೆಟ್ಟೆ, ಸತೀಶ, ಸುರೇಶ ಪಾಟೀಲ್, ಬಾಪು ಕಾಳೆ, ನೀಲಕಂಠ ನಿಟ್ಟೂರೆ, ಮಹಾರುದ್ರ, ಪಾಂಡುರಂಗ ಪಾಟೀಲ್, ವಿಶ್ವನಾಥ ನಿಟ್ಟೂರೆ ಮತ್ತು ವಿವಿಧ ಗ್ರಾಮಗಳ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net