

ಗಜೇಂದ್ರಗಡ: ಪಟ್ಟಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆ ಪಟ್ಟಣದ ಸಾಹಿತ್ಯಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಸಮ್ಮೇಳನದ ದಿನಾಂಕವನ್ನು 2023ರಿಂದ ಪದೇಪದೆ ಮುಂದೂಡುತ್ತ ಬರಲಾಗಿದೆ. ಈಗಾಗಲೇ ಸಮ್ಮೇಳನ ಅಧ್ಯಕ್ಷರ ಆಯ್ಕೆಯೂ ಆಗಿದ್ದು, ಅವರಿಗೆ ಆಮಂತ್ರಣವನ್ನೂ ನೀಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಸಮ್ಮೇಳನದ ಪೂರ್ವಭಾವಿ ಸಭೆ ಬಹಳಷ್ಟು ಮಹತ್ವ ಪಡೆದಿತ್ತು. ಆದರೆ ಸಭೆಗೆ ಹಿರಿಯ ಸಾಹಿತಿಗಳು, ಕಸಾಪಕ್ಕಾಗಿ ದುಡಿದವರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರನ್ನು ಕಸಾಪ ಆಹ್ವಾನಿಸಿರಲಿಲ್ಲ. ಈ ನಡೆ ಸಾಹಿತ್ಯಾಸಕ್ತರಿಗೆ ಬೇಸರ ಮೂಡಿಸಿತು. ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ , ಕಸಾಪ ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಕದಳಿ ಮಹಿಳಾ ಅಧ್ಯಕ್ಷೆ ಮಂಜುಳಾ ರೇವಡಿ, ಎಚ್.ಎಸ್. ಸೋಂಪುರ, ಬಿ.ಟಿ. ಹೊಸಮನಿ, ಎಸ್.ಐ. ಪತ್ತಾರ, ಆರ್.ಜಿ. ಮ್ಯಾಕಲ್, ಹುಚ್ಚಪ್ಪ ಹಾವೇರಿ, ಬಿ.ಸಿ. ಅಂಗಡಿ, ಅರವಿಂದ ಕವಡಿಮಟ್ಟಿ, ಆರ್.ಕೆ. ಬಾಗವಾನ, ಇತರರಿದ್ದರು.