

ರಾಯಚೂರು: ಅಂಗವಿಕಲರಿಗೆ ರೈಲು ಪ್ರಯಾಣ ದರದಲ್ಲಿ ಏಕರೂಪದ ರಿಯಾಯಿತಿ ನೀಡಬೇಕು ಹಾಗೂ ಎಲ್ಲ ರೈಲುಗಳಿಗೆ ರಿಯಾಯಿತಿ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ನಿಯೋಗ ಸ್ಥಳೀಯ ರೈಲು ನಿಲ್ದಾಣದ ವ್ಯವಸ್ಥಾಪಕಗೆ ಬುಧವಾರ ಮನವಿ ಸಲ್ಲಿಸಿ, ಅಂಗವಿಕಲರಿಗೆ ನೀಡಲಾಗುವ ರಿಯಾಯಿತಿಯಲ್ಲಿ ವ್ಯತ್ಯಾಸವಿದ್ದು, ವಿವಿಧ ವರ್ಗದ ಅಂಗವಿಕಲರಿಗೆ ಬೇರೆ ಬೇರೆ ರಿಯಾಯಿತಿ ನೀಡಲಾಗಿದೆ. ಅದನ್ನು ಏಕರೂಪಗೊಳಿಸಬೇಕು ಎಂದು ಆಗ್ರಹಿಸಿದರು.
ತತ್ಕಾಲ್ ಟಿಕೆಟ್‌ಗಳ ಮೇಲೆ ಶೇ.75ರಷ್ಟು ರಿಯಾಯಿತಿ ನೀಡಬೇಕು. ಇತರ ಟಿಕೆಟ್‌ಗಳಿಗೆ ನೀಡಲಾದ ರಿಯಾಯಿತಿಯನ್ನು ತತ್ಕಾಲ್‌ಗೂ ವಿಸ್ತರಿಸಬೇಕು. ಕೇಂದ್ರ ಸರ್ಕಾರ ಅಂಗವಿಕಲರಿಗೆ ಪ್ರತ್ಯೇಕ ಕಾರ್ಡ್ ನೀಡುತ್ತಿದೆ. ಆದರೆ ರೈಲ್ವೆ ಅಂಗವಿಕಲರಿಗಾಗಿ ಯುಡಿಐ ಪರಿಚಯಿಸಿದ್ದು, ಅಂಗವೈಕಲ್ಯ ಪ್ರಮಾಣಪತ್ರದ ಹೊರತಾಗಿ ಇದನ್ನು ನೀಡಲಾಗುತ್ತಿದೆ.
ಆರ್‌ಪಿಡಿ ಕಾಯ್ದೆಯಡಿ ರೈಲ್ವೆ ಅಂಗವಿಕಲ ಪ್ರಮಾಣಪತ್ರ ಅಥವಾ ಕಾರ್ಡ್ ಸ್ವೀಕರಿಸಬೇಕು. ಅನೇಕ ಬಾರಿ ಇತರೆ ಪ್ರಯಾಣಿಕರು, ರೈಲ್ವೆ ಉದ್ಯೋಗಿಗಳು, ಆರ್‌ಪಿಎ್ ಸಿಬ್ಬಂದಿ ಅಂಗವಿಕಲರಿಗೆ ಮೀಸಲಾದ ಆಸನಗಳನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯಬೇಕು. ಅಂಗವಿಕಲರಿಗೆ ಮಾತ್ರ ಆಸನ ಬಳಕೆಗೆ ಕ್ರಮಕೈಗೊಳ್ಳಬೇಕು.
ರೈಲು ನಿಲ್ದಾಣದಲ್ಲಿ ಒಂದು ಪ್ಲಾಟಾರ್ಮ್‌ನಿಂದ ಮತ್ತೊಂದು ಪ್ಲಾಟಾರ್ಮ್‌ಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಅಗತ್ಯವಿರುವ ಕಡೆ ಇಳಿಜಾರು ಹಾಗೂ ಲ್‌ಟಿ ವ್ಯವಸ್ಥೆ ಮಾಡಬೇಕು. ಪ್ರತ್ಯೇಕ ವಿಶ್ರಾಂತಗೃಹದ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಹೊನ್ನಪ್ಪ ಗೂಳಪ್ಪನವರ್, ಪದಾಕಾರಿಗಳಾದ ಕರಿಯಪ್ಪ ಅಚ್ಚೋಳ್ಳಿ, ಧರ್ಮರೆಡ್ಡಿ, ನರಸಿಂಹಲು ಕಟ್ಟಿಮನಿ, ತಿಮ್ಮಪ್ಪ, ಹನುಮಂತಪ್ಪ, ನಾಗರಾಜ ಇದ್ದರು.