ಆಭರಣಗಳ ಖರೀದಿ ಮೇಲೆ ರಿಯಾಯಿತಿ ಘೋಷಣೆ

h1-Bhima Gold 3
Published on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭೀಮ ಜುವೆಲರರ್ಸ್ ದೊಡ್ಡ ಮಳಿಗೆಯು ಗುರುವಾರ ಆರಂಭವಾಗಿದ್ದು, ವಿಭಿನ್ನ ವಿನ್ಯಾಸ, ಕುಶಲತೆಯುಳ್ಳ ಆಭರಣಗಳ ಮೇಲೆ ಉದ್ಘಾಟನೆ ನಿಮಿತ್ತ ರಿಯಾಯಿತಿಗಳನ್ನು ಪ್ರಕಟಿಸಿದೆ.
ಉದ್ಘಾಟನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್, ವಿದ್ಯಾನಗರದಲ್ಲಿ ಆರಂಭವಾಗಿರುವ ಭೀಮ ಜುವೆಲರ್ರ್ಸ್‌ ಮಳಿಗೆಯು ಗ್ರಾಹಕರಿಗೆ ತನ್ನ ಹಿರಿಮೆಯನ್ನು ಪರಿಚಯಿಸುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಮಳಿಗೆ ಇದು. ದಕ್ಷಿಣ ಭಾರತದ ಸಾಂಪ್ರದಾಯಿಕ ವಿನ್ಯಾಸ ಮತ್ತು ಮೊಘಲ್ ಪ್ರೇರಿತ ಚಿನ್ನಾಭರಣಗಳ ಸಂಗ್ರಹಕ್ಕೆ ಇಲ್ಲಿ ಬೇಡಿಕೆ ಸೃಜನೆಯಾಗಲಿದೆ. ಕೊಲ್ಹಾಪುರಿ ಶೈಲಿ, ಬೋರ್ಮಳ ಮತ್ತು ತೋಡಾಗಳಂಥ ವಿಶಿಷ್ಟ ಚಿನ್ನಾಭರಣಗಳು ಇಲ್ಲಿಯ ಜನರಿಗೆ ಮೆಚ್ಚುಗೆ ಆಗಲಿವೆ. ಉದ್ಘಾಟನೆ ನಿಮಿತ್ತ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಫೆ. 1ರಿಂದ 4ರವರೆಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವ ಗ್ರಾಹಕರು ಮೇಕಿಂಗ್ ಶುಲ್ಕದಲ್ಲಿ ಶೇ. 70ರವರೆಗೆ ರಿಯಾಯಿತಿ ಪಡೆಯಲಿದ್ದಾರೆ. ವಜ್ರಾಭರಣಗಳ ಖರೀದಿಯ ಮೇಲೆ ಗ್ರಾಹಕರು ಪ್ರತಿ ಕ್ಯಾರೆಟ್‌ಗೆ 7 ಸಾವಿರ ರೂ. ನಗದು ಮರಳಿ (ಕ್ಯಾಶ್‌ಬ್ಯಾಕ್) ಪಡೆಯಲಿದ್ದಾರೆ. ಜತೆಗೆ 3 ಲಕ್ಷ ರೂ. ಮೌಲ್ಯದ ಪೂರಕ ಗಿಫ್ಟ್ ಸಿಗಿದೆ. ಹಳೆಯ ಚಿನ್ನಾಭರಣಗಳ ವಿನಿಮಯದ ಮೂಲಕ ಪ್ರತಿ ಗ್ರಾಂ ಚಿನ್ನದ ದರದಲ್ಲಿ 100 ರೂ.ವರೆಗೆ ಹೆಚ್ಚುವರಿ ಲಾಭ ಪಡೆಯಬಹುದು. ಪ್ರತಿ ದಿನ ಮೂರು ಗಂಟೆಗೊಮ್ಮೆ ವಿಶೇಷ ಲಕ್ಕಿ ಡ್ರಾ ಮೂಲಕ ಒಂದು ಹೋಂಡಾ ಆ್ಯಕ್ಟಿವಾ ಗೆಲ್ಲುವ ಸುವರ್ಣಾವಕಾಶ ಸಿಗಲಿದೆ. 30 ಸಾವಿರ ರೂ.ವರೆಗೆ ಗ್ರಾಹಕರು ಆಭರಣಗಳನ್ನು ಖರೀದಿ ಮಾಡಿದರೆ ಮಾತ್ರ ಈ ಗಿಫ್ಟ್ ಲಭ್ಯ ಎಂದರು.
ಕರ್ನಾಟಕದಲ್ಲಿ 15 ಮಳಿಗೆ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ತಲಾ 2 ಮಳಿಗೆ ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಕಲಬುರ್ಗಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಮಳಿಗೆ ಆರಂಭಿಸಲಾಗುವುದು ಎಂದರು.
ಉದ್ಘಾಟಿಸಿ ಮಾತನಾಡಿದ ಮೇಯರ್ ವೀಣಾ ಬರದ್ವಾಡ, ಸುಂದರ ಪರಿಸರದಲ್ಲಿ ಮಳಿಗೆ ಆರಂಭವಾಗಿವೆ. ವಿವಿಧ ವಿನ್ಯಾಸದ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದು ಅತ್ಯದ್ಭುತ ಮಳಿಗೆ ಎಂದು ವರ್ಣಿಸಿದರು.
ಭೀಮ ಗೋಲ್ಡ್ ನಿದೇಶಕಿ ಸಾವಿತ್ರಿ ಕೃಷ್ಣನ್, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಹೋಟೆಲ್ ಉದ್ಯಮಿಗಳಾದ ಅನಂತಪದ್ಮನಾಭ ಐತಾಳ, ಶ್ರೀಕಾಂತ ಕೆಮ್ತೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net