ಸ್ಥಗಿತಗೊಂಡಿದ್ದ ರೈತ ಸಂಘ, ಹಸಿರು ಸೇನೆಗೆ ಮರು ಚಾಲನೆ

4 kollegal-1.B
Published on

ಕೊಳ್ಳೇಗಾಲ: ರೈತ ಮುಖಂಡರ ಆಂತರಿಕ ಬಿನ್ನಾಭಿಪ್ರಾಯ ಮತ್ತು ಗೊಂದಲದಿಂದ ಸ್ಥಗಿತಗೊಂಡಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕಕ್ಕೆ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ಗುರುವಾರ ಮರು ಚಾಲನೆ ನೀಡಲಾಯಿತು.

ರೈತ ಮುಖಂಡರಾದ ತೇರಂಬಳ್ಳಿ ಮಹದೇವಪ್ಪ, ಅಣಗಳ್ಳಿ ಬಸವರಾಜು, ಪುಟ್ಟರಾಜೇಅರಸ್, ಲಕ್ಷ್ಮಣ್, ರಾಮಕೃಷ್ಣ, ಮಾ.ಬಸವ ರಾಜು, ಕುಣಗಳ್ಳಿ ರಂಗಸ್ವಾಮಿ ನೇತೃತ್ವದ ತಂಡ, ಸಂಘಕ್ಕೆ ಮರುಜೀವ ನೀಡುವ ಕುರಿತು ಗ್ರಾಮದ ರೈತ ಮುಖಂಡರೊಂದಿಗೆ ಸಭೆ ನಡೆಸಿತು. ಬಳಿಕ 30ಕ್ಕೂ ಹೆಚ್ಚು ರೈತ ಮುಖಂಡರು ಸಂಘಕ್ಕೆ ಹೊಸದಾಗಿ ಸೇರ್ಪಡೆಗೊಂಡರು.

ಹೊಸ ಪದಾಧಿಕಾರಿಗಳ ಆಯ್ಕೆ: ಗ್ರಾಮದ ಕೆರೆ ತಟದಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ನಾಮಫಲಕ್ಕೆ ಪೂಜೆ ಸಲ್ಲಿಸಿ, ಸಂಘಕ್ಕೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಅಧ್ಯಕ್ಷರಾಗಿ ಆರ್.ಮದೇವಪ್ಪ, ಉಪಾಧ್ಯಕ್ಷರಾಗಿ ಬಿ.ತೋಟೇಶ್, ಕಾರ್ಯದರ್ಶಿಯಾಗಿ ಜಿ.ಪ್ರಕಾಶ್, ಖಜಾಂಚಿಯಾಗಿ ನಟರಾಜು, ಉಮೇಶ್, ಸಂಚಾಲಕರಾಗಿ ನಾಗರಾಜು, ಪಶುಪತಿ, ರೇವಣ್ಣ ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net