ಶಿಸ್ತು ಕಲಿಯಲು ಎನ್‌ಎಸ್‌ಎಸ್ ಸಹಕಾರಿ

7
Published on

ಅಥಣಿ ಗ್ರಾಮೀಣ: ಶಿಸ್ತು ಹಾಗೂ ಸಮಯ ಪಾಲನೆಗೆ ಎನ್‌ಎಸ್‌ಎಸ್ ಶಿಬಿರ ಸಹಕಾರಿ ಎಂದು ಕಾಲೇಜು ಮುರುೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಿರಣಕುಮಾರ ಗುರವ ಹೇಳಿದರು.

ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಶ್ರೀ ಅಡವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಣಿಯ ಮುರುಘೇಂದ್ರ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಜೀವನದ ಸಾರ ತಿಳಿಸುತ್ತದೆ ಎಂದರು.

ಆಡಳಿತಾಧಿಕಾರಿ ಎಸ್.ಎಂ.ನಾಯಿಕ ಮಾತನಾಡಿ, ಶಿಬಿರಾರ್ಥಿಗಳು ಪರಿಸರಪ್ರಜ್ಞೆ, ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು. ಮುಖಂಡ ಗುರುಲಿಂಗಯ್ಯ ಹಿರೇಮಠ, ಪ್ರಾಚಾರ್ಯ ಪರುಶುರಾಮ ಮಾದರ, ಶಿಬಿರಾಧಿಕಾರಿ ದಸ್ತಗೀರ್ ನದ್ಾ, ಪೂಜಾ ಧರಿಗೌಡ, ರೂಪಾ ಕಣಬೂರ, ಶ್ರೀನಿಧಿ ದಳವಾಯಿ, ಎಸ್.ಎಂ.ತಳವಾರ, ಜ್ಞಾನೇಶ್ವರ ಚೌಗಲಾ, ಶುಭಾಂಗಿ ವಾಘಮೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net