ರಂಗಭೂಮಿ, ಶಿಕ್ಷಣಕ್ಕೆ ಶಿಸ್ತು ಮುಖ್ಯ

25MDG1 SHIBIRA
Published on

ಮುಂಡರಗಿ: ರಂಗಭೂಮಿ ಮತ್ತು ಶಿಕ್ಷಣಕ್ಕೆ ಶಿಸ್ತು ಮುಖ್ಯ. ರಂಗಭೂಮಿ ಮತ್ತು ನಾಟಕಗಳು ಶಿಸ್ತನ್ನು ಕಲಿಸಿಕೊಡುತ್ತದೆ. ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ಕ್ರಿಯಾತ್ಮಕ ವಿಚಾರ ಚಿಂತನೆಗಳು ಹೆಚ್ಚುತ್ತವೆ. ಇದರಿಂದ ಅವರ ಆಲೋಚನೆಗಳು, ಚಿಂತನೆಗಳು ವೃದ್ಧಿಯಾಗುತ್ತವೆ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗೀತ ನೃತ್ಯ ನಾಟಕ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳಿಗೆ ಶಾಲಾ ಅಂಗಳದಲ್ಲಿ ಸಂಜೆ ರಂಗ ಶಿಬಿರ ಹಾಗೂ ಪಠ್ಯ ಪೋಷಕ ನಾಟಕ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಶಿಕ್ಷಕ ಡಾ.ನಿಂಗು ಸೊಲಗಿ ಮಾತನಾಡಿ, ರಂಗ ಶಿಬಿರ ಮತ್ತು ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುವುದರಿಂದ ಮಕ್ಕಳಲ್ಲಿ ವಿಭಿನ್ನ ಕಲಿಕೆ ಮತ್ತು ಉತ್ಸಾಹ ಮೂಡಿಬರುತ್ತದೆ ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯೆ ದೇವಕ್ಕ ದಂಡಿನ, ಸಂಸ್ಥೆಯ ಕಾರ್ಯದರ್ಶಿ ಸತ್ಯಪ್ಪ ಛಲವಾದಿ, ಶಿಕ್ಷಕರು, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net